Updated: Friday, December 18, 2020, 11:33 AM [IST]
2020 ರಲ್ಲಿ ಇಡಿ ವಿಶ್ವವೇ ಕೊರೊನಾ ಮಹಾಮಾರಿಯಿಂದ ಬಳಲಿತು. ಎಲ್ಲ ಉದ್ಯಮಗಳಂತೆ ಚಿತ್ರರಂಗ ಕೂಡ ಸ್ತಬ್ಧವಾಯಿತು. ಆದರೂ ಈ ವರ್ಷದ ಆರಂಭದಲ್ಲಿ ಕೆಲ ಉತ್ತಮ ಚಿತ್ರಗಳು ತೆರೆಕಂಡು ಜನಮನ ಗೆದ್ದವು. ಇಲ್ಲಿ ಈ ವರ್ಷದ ಅತ್ಯುತ್ತಮ ಚಿತ್ರಗಳನ್ನು ನೀಡಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ ಲವ್ ಮಾಕಟೇಲ್ ಈ ವರ್ಷದ ಮೊದಲ ಯಶಸ್ವಿ ಚಿತ್ರವೆನ್ನಬಹದು. ನಾಯಕಿಯರಾಗಿ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರಚನಾ ಇಂಡೆರ್ ಅದ್ಭುತ ಅಭಿನಯ ನೀಡಿದ್ದರು. ಚಿತ್ರಮಂದಿರ ಮಾತ್ರವಲ್ಲದೇ ಓಟಿಟಿಯಲ್ಲೂ ಕೂಡ ಚಿತ್ರ ಅಪಾರ ವೀಕ್ಷಣೆ ಪಡೆಯಿತು.
Best Kannada Movies Of 2020-Love Mocktail/top-listing/best-kannada-movies-of2020-love-mocktail-3-8214-783.html
ರವಿಕಿರಣ್ ವಿಕಾಸ್ ನಿರ್ದೇಶಿಸಿ ನಾಯಕನಾಗಿ ನಟಿಸಿದ ಹಾರರ್ ರೋಮ್ಯಾಂಟಿಕ್ ಕಾಮಿಡಿ ಚಿತ್ರ ಕಾಣದಂತೆ ಮಾಯವಾದನು ಕೂಡ ಜನಮೆಚ್ಚುಗೆ ಪಡೆಯಿತು. ನಾಯಕಿಯಾಗಿ ಸಿಂಧು ಲೋಕನಾಥ್ ನಟಿಸಿದ್ದರೆ, ಪ್ರಮುಖ ಪಾತ್ರಗಳಲ್ಲಿ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ಧರ್ಮಣ್ಣ ಕಡೂರು ನಟಿಸಿದ್ದರು.
Best Kannada Movies Of 2020-Kaanadanthe Maayavadanu/top-listing/best-kannada-movies-of2020-kaanadanthe-maayavadanu-3-8215-783.html
ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ನಾನು ಮತ್ತು ಗುಂಡ ಚಿತ್ರ ಮುಗ್ದ ನಾಯಿ ಗುಂಡ ಮತ್ತು ಅಟೋ ಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವ್ಯವನ್ನು ತೋರಿಸುತ್ತದೆ. ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದರು.ಭಾವನಾತ್ಮಕವಾಗಿ ಚೆನ್ನಾಗಿ ಮೂಡಿಬಂದಿರುವ ಸಿನಿಮಾ ಪ್ರೇಕ್ಷಕರ ಮನಸ್ಸು ಮುಟ್ಟಿತು.
Best Kannada Movies Of 2020-Naanu Matthu Gunda/top-listing/best-kannada-movies-of2020-naanu-matthu-gunda-3-8216-783.html