twitter

    ಮನಸ್ಸಿನಾಟ ಕಥೆ

    ಆರ್ ರವಿಂದ್ರ ನಿರ್ದೇಶನ ಮಾಡಿರುವ ಮನಸ್ಸಿನಾಟ ಚಿತ್ರವನ್ನು ಡಿ.ಮಂಜುನಾಥ ಮತ್ತು ಹನುಮೇಶ್ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಸಂಗೀತ ನೀಡಿದ್ದು ರಾಜೇಶ್ ಕೃಷ್ಣನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ. ಚಿತ್ರದಲ್ಲಿ ದತ್ತಣ್ಣ, ಮಂಜುನಾಥ ಹೆಗಡೆ, ಯಮುನಾ ಶ್ರೀನಿಧಿ, ರಮೇಶ್ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    ಯುವಕರಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದ ಬ್ಲು ವೇಲ್ ಚಾಲೇಂಜ್ (ನೀಲಿ ತಿಮಿಂಗಲ) ಮೇಲೆ ಚಿತ್ರದ ಕಥೆ ಆಧಾರಿತವಾಗಿದೆ. ವಿಡಿಯೋ ಗೇಮ್ ಆಟಗಳು ನಮಗೆ ಮನರಂಜನೆ ನೀಡಬೇಕೆ ಹೊರತು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿ ನಮ್ಮ ಸಾವಿಗೆ ಕಾರಣವಾಗಬಾರದು ಎಂಬ ಸಂದೇಶವನ್ನು ಚಿತ್ರತಂಡ ನೀಡುತ್ತದೆ. ಇಬ್ಬರು ಹತ್ತು ವರ್ಷದ ಬಾಲಕರು ಈ ನೀಲಿ ತಿಮಿಂಗಲ ಗೇಮ್ ನಲ್ಲಿ ಭಾಗವಹಿಸುತ್ತಾರೆ. ಪ್ರತಿ ಹಂತದಿಂದ ಹಂತೆಕ್ಕೆ ಹೋದಂತೆ ಬಾಲಕರಿಗೆ ಗೇಮ್ ಥ್ರಿಲ್ ನೀಡುತ್ತಾದರೂ ಅವರ ಜೀವಕ್ಕೆ ರಿಸ್ಕ್ ಕೂಡ ಹೆಚ್ಚಾಗುತ್ತೆ. ಈ ಸುಳಿಯಿಂದ ಅವರು ಹೊರಬರುತ್ತಾರಾ ಅಥವಾ ಅವರು ಈ ಗೇಮಿನ ಸುಳಿಯಲ್ಲಿ ಬಲಿಯಾಗಿ ಆತ್ಮಹತ್ಯೆ ಹಾದಿ ಹಿಡಯುತ್ತಾರಾ? ಎಂಬುದು ಮುಂದಿನ ಕಥೆ.
    **Note:Hey! Would you like to share the story of the movie ಮನಸ್ಸಿನಾಟ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X