ಮನೆ ಮಾರಾಟಕ್ಕಿದೆ ಕಥೆ

  ಶ್ರಾವಣಿ ಸುಬ್ರಮಣ್ಯ ಮತ್ತು ಶ್ರೀಕಂಠ ಚಿತ್ರಗಳ ಖ್ಯಾತಿ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾರರ್ ಕಾಮಿಡಿ `ಮನೆ ಮಾರಾಟಕ್ಕಿದೆ' ಚಿತ್ರದಲ್ಲಿ ಸಾಧು ಕೋಕಿಲಾ, ಚಿಕ್ಕಣ್ಣ, ರವಿಶಂಕರ ಗೌಡ, ಕುರಿ ಪ್ರತಾಪ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ಶೃತಿ ಹರಿಹರನ್ ಮತ್ತು ಕಾರುಣ್ಯ ರಾಮ್ ಅಭಿನಯಿಸಿದ್ದಾರೆ.ಚಿತ್ರಕ್ಕೆ ಎಸ್.ವಿ.ಬಾಬು ಬಂಡವಾಳ ಹೂಡಿದ್ದಾರೆ.

  ವಿದೇಶದಲ್ಲಿ ನೆಲೆಸಿರುವ ಶ್ರವಣ, ತಮ್ಮ ತಂದೆ-ತಾಯಿ ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸುತ್ತಾನೆ. ಆದರೆ, ಆ ಮನೆಯನ್ನು ಖರೀದಿ ಮಾಡಲು ಬರುವವರು ಮನೆಯಲ್ಲಿ ದೆವ್ವದ ಕಾಟ ಇದೆ ಎಂದು ಓಡಿ ಹೋಗ್ತಾರೆ. ಯಾರೂ ಈ ಬಂಗಲೆ ತೆಗೆದುಕೊಳ್ಳಲು ಮುಂದೆ ಬರಲ್ಲ. ಆಗ, ಈ ಮನೆಯನ್ನ ಮಾರಲು ನಾವು ಸಹಾಯ ಮಾಡುತ್ತೇವೆ ಎಂದು ಆ ಮನೆ ಸೇರುವ ನಾಲ್ಕು ಕಲಾಕಾರರು ರಘುಪತಿ (ಚಿಕ್ಕಣ್ಣ), ರಾಘವ (ಸಾಧುಕೋಕಿಲಾ), ರಾಜ (ಕುರಿ ಪ್ರತಾಪ್), ರಾಮ (ರವಿಶಂಕರ್ ಗೌಡ). ಆ ಮನೆಯಲ್ಲಿರುವ ದೆವ್ವಗಳು ಓಡಿಸುತ್ತಾರಾ? ಮನೆ ಮಾರಾಟ ಮಾಡಲು ಈ ನಾಲ್ವರು ಹೇಗೆ ಸಹಾಯ ಮಾಡ್ತಾರೆ ಎನ್ನುವುದು ಚಿತ್ರದ ಮುಂದಿನ ಕಥೆ.

  **Note:Hey! Would you like to share the story of the movie ಮನೆ ಮಾರಾಟಕ್ಕಿದೆ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X