X
ಮತ್ತೆ ಉದ್ಭವ
Comedy | Drama | 07 Feb 2020 | U/A | 151 Mins
Kannada

ಮತ್ತೆ ಉದ್ಭವ ಕಥೆ

ಪ್ರಸಿದ್ಧ ನಾಟಕ ``ಉದ್ಭವ'' ವನ್ನು ತೆರೆ ಮೇಲೆ ಅಳವಡಿಸಿ ಯಶಸ್ಸು ಪಡೆದಿದ್ದ ಕೋಡ್ಲು ರಾಮಕೃಷ್ಣ, ಅದರ ಮುಂದುವರೆದ ಭಾಗವಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಸ್ಯಮಿಶ್ರಿತ ರಾಜಕೀಯ ವ್ಯಂಗ್ಯದಿಂದ ಕೂಡಿರುವ ಈ ಚಿತ್ರದಲ್ಲಿ ಪ್ರಮೋದ್ ಮಂಜು ಮತ್ತು ಮಿಲನಾ ನಾಗರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನಿತ್ಯಾನಂದ ಭಟ್, ರಾಜೇಶ್, ಸತ್ಯ, ಮಹೇಶ್ ಮುದ್ಗಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ವಿ ಮನೋಹರ್ ಸಂಗೀತವಿರುವ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಮತ್ತು ಪ್ರಹ್ಲಾದ್ ರ ಸಾಹಿತ್ಯವಿದೆ. ಕರ್ವ ಖ್ಯಾತಿಯ ಮೋಹನ್ ಕ್ಯಾಮರಾ ವರ್ಕ್ ಮಾಡಿದ್ದರೆ, ಬಿ.ಎಸ್.ಕೆಂಪರಾಜು ಸಂಕಲನ ಮಾಡಿದ್ದಾರೆ. ಒಂದು ಉದ್ಭವ ಗಣೇಶ್ ಮೂರ್ತಿಯ ಸುತ್ತುವ ರಾಜಕೀಯವನ್ನು ತಿಳಿ ವ್ಯಂಗದ ಮೂಲಕ ಚಿತ್ರದಲ್ಲಿ ಬಿಂಬಿಸಲಾಗಿದೆ.

ಕಥೆ: ರಾಜಕಾರಣಿಯೊಬ್ಬರು ಮಠದಲ್ಲಿ ದುಡ್ಡು ಬಚ್ಚಿಟ್ಟು ಮೋಸ ಹೋಗುವುದು, ಗುರೂಜಿಯೊಬ್ಬರು ರಾಸಲೀಲೆ ಮಾಡಿ ಸಿಕ್ಕಿ ಬೀಳುವುದು, ಯುವ ನಟಿಯೊಬ್ಬರು ಅಕಾಸ್ಮಾತ್ ಆಗಿ ರಾಜಕಾರಣಕ್ಕೆ ಬರುವುದು, ಮಾಜಿ ಮಂತ್ರಿಯೊಬ್ಬರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವುದು, ಮಾಲ್ ಕಟ್ಟಲು ಬಿಲ್ಡರ್ ಡೀಲ್ ಮಾಡುವುದು, ನಂಬಿಕೆ ಹೆಸರಿನಲ್ಲಿ ದೇವಸ್ಥಾನ ಮತ್ತು ದೇವರನ್ನು ಬಳಸಿಕೊಂಡು ಜನರನ್ನು ವಂಚಿಸುವುದು ಹೀಗೆ ಸಮಾಜದಲ್ಲಿ ಮತ್ತು ಸುದ್ದಿಯಾದ ಅನೇಕ ಘಟನೆಗಳ ಜೋಡಣೆ ಈ ಚಿತ್ರದಲ್ಲಿದೆ.

ದೇವಸ್ಥಾನದ ಧರ್ಮದರ್ಶಿ (ರಂಗಾಯಣ ರಘು) ಮತ್ತು ಮಗ (ಪ್ರಮೋದ್) ಇಬ್ಬರು ಸೇರಿ ಜನರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಹೇಗೆ ಮೂರ್ಖರನ್ನಾಗಿಸುತ್ತಾರೆ ಎನ್ನುವುದು ಚಿತ್ರದ ಕಥೆ. ರಾತ್ರೋರಾತ್ರಿ ಉದ್ಭವವಾಗಿದ್ದ ಗಣೇಶ ಉದ್ಭವ ಮೂರ್ತಿನಾ ಅಥವಾ ಮಾನವ ಹುಟ್ಟುಹಾಕಿದ್ದ ಎಂಬ ಚರ್ಚೆ ಅನೇಕ ಟ್ವಿಸ್ಟ್ ಗಳಿವೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+