X
ಕನ್ನಡ » ಚಲಚಿತ್ರಗಳು » ಮತ್ತೆ ಉದ್ಭವ
ಮತ್ತೆ ಉದ್ಭವ

ಮತ್ತೆ ಉದ್ಭವ

Comedy | Drama | 07 Feb 2020 | U/A | 151 Mins
Kannada

2.5 /5 Users

3.5 /5 Filmibeat

ಮತ್ತೆ ಉದ್ಭವ ಕಥೆ

ಪ್ರಸಿದ್ಧ ನಾಟಕ ``ಉದ್ಭವ'' ವನ್ನು ತೆರೆ ಮೇಲೆ ಅಳವಡಿಸಿ ಯಶಸ್ಸು ಪಡೆದಿದ್ದ ಕೋಡ್ಲು ರಾಮಕೃಷ್ಣ, ಅದರ ಮುಂದುವರೆದ ಭಾಗವಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಸ್ಯಮಿಶ್ರಿತ ರಾಜಕೀಯ ವ್ಯಂಗ್ಯದಿಂದ ಕೂಡಿರುವ ಈ ಚಿತ್ರದಲ್ಲಿ ಪ್ರಮೋದ್ ಮಂಜು ಮತ್ತು ಮಿಲನಾ ನಾಗರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನಿತ್ಯಾನಂದ ಭಟ್, ರಾಜೇಶ್, ಸತ್ಯ, ಮಹೇಶ್ ಮುದ್ಗಲ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ವಿ ಮನೋಹರ್ ಸಂಗೀತವಿರುವ ಈ ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಮತ್ತು ಪ್ರಹ್ಲಾದ್ ರ ಸಾಹಿತ್ಯವಿದೆ. ಕರ್ವ ಖ್ಯಾತಿಯ ಮೋಹನ್ ಕ್ಯಾಮರಾ ವರ್ಕ್ ಮಾಡಿದ್ದರೆ, ಬಿ.ಎಸ್.ಕೆಂಪರಾಜು ಸಂಕಲನ ಮಾಡಿದ್ದಾರೆ. ಒಂದು ಉದ್ಭವ ಗಣೇಶ್ ಮೂರ್ತಿಯ ಸುತ್ತುವ ರಾಜಕೀಯವನ್ನು ತಿಳಿ ವ್ಯಂಗದ ಮೂಲಕ ಚಿತ್ರದಲ್ಲಿ ಬಿಂಬಿಸಲಾಗಿದೆ. ಕಥೆ : ರಾಜಕಾರಣಿಯೊಬ್ಬರು ಮಠದಲ್ಲಿ ದುಡ್ಡು ಬಚ್ಚಿಟ್ಟು ಮೋಸ ಹೋಗುವುದು, ಗುರೂಜಿಯೊಬ್ಬರು ರಾಸಲೀಲೆ ಮಾಡಿ ಸಿಕ್ಕಿ ಬೀಳುವುದು, ಯುವ ನಟಿಯೊಬ್ಬರು ಅಕಾಸ್ಮಾತ್ ಆಗಿ ರಾಜಕಾರಣಕ್ಕೆ ಬರುವುದು, ಮಾಜಿ ಮಂತ್ರಿಯೊಬ್ಬರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವುದು, ಮಾಲ್ ಕಟ್ಟಲು ಬಿಲ್ಡರ್ ಡೀಲ್ ಮಾಡುವುದು, ನಂಬಿಕೆ ಹೆಸರಿನಲ್ಲಿ ದೇವಸ್ಥಾನ ಮತ್ತು ದೇವರನ್ನು ಬಳಸಿಕೊಂಡು ಜನರನ್ನು ವಂಚಿಸುವುದು ಹೀಗೆ ಸಮಾಜದಲ್ಲಿ ಮತ್ತು ಸುದ್ದಿಯಾದ ಅನೇಕ ಘಟನೆಗಳ ಜೋಡಣೆ ಈ ಚಿತ್ರದಲ್ಲಿದೆ. ದೇವಸ್ಥಾನದ ಧರ್ಮದರ್ಶಿ (ರಂಗಾಯಣ ರಘು) ಮತ್ತು ಮಗ (ಪ್ರಮೋದ್) ಇಬ್ಬರು ಸೇರಿ ಜನರನ್ನು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಹೇಗೆ ಮೂರ್ಖರನ್ನಾಗಿಸುತ್ತಾರೆ ಎನ್ನುವುದು ಚಿತ್ರದ ಕಥೆ. ರಾತ್ರೋರಾತ್ರಿ ಉದ್ಭವವಾಗಿದ್ದ ಗಣೇಶ ಉದ್ಭವ ಮೂರ್ತಿನಾ ಅಥವಾ ಮಾನವ ಹುಟ್ಟುಹಾಕಿದ್ದ ಎಂಬ ಚರ್ಚೆ ಅನೇಕ ಟ್ವಿಸ್ಟ್ ಗಳಿವೆ.  
Read More

ಮತ್ತೆ ಉದ್ಭವ ಕಲಾವಿದರು ಮತ್ತು ಸಿಬ್ಬಂದಿ

ಮತ್ತೆ ಉದ್ಭವ ಕ್ರೂ ಮಾಹಿತಿ

ನಿರ್ದೇಶಕ ಕೋಡ್ಲು ರಾಮಕೃಷ್ಣ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಮನೋಹರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮತ್ತೆ ಉದ್ಭವ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಮನರಂಜನೆ ಮಾತ್ರವಲ್ಲ ಉತ್ತಮ ಸಂದೇಶವೂ ಈ ಚಿತ್ರದಲ್ಲಿದೆ. ಧಾರ್ಮಿಕತೆ, ಮೂಡನಂಬಿಕೆ, ರಾಜಕಾರಣಿಗಳು, ಸ್ವಾಮೀಜಿ, ಆಶ್ರಮ, ಭ್ರಷ್ಟಾಚಾರ, ರಿಯಲ್ ಎಸ್ಟೇಟ್, ಸಿನಿಮಾ ಹೀಗೆ ಸಮಾಜದ ಪ್ರತಿ ಕ್ಷೇತ್ರವನ್ನು ಅಣುಕು ಮಾಡುವ ಮೂಲಕ ಜನರನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಲಾಗಿದೆ. ಉದ್ಭವದಂತೆ ಮತ್ತೆ ಉದ್ಭವ ಚಿತ್ರವೂ ಅತ್ಯುತ್ತಮ ಎನ್ನಬಹುದು.

ಮತ್ತೆ ಉದ್ಭವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮತ್ತೆ ಉದ್ಭವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+