ವಿನೋದ್ ಪೂಜಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಾಯಾ ಕನ್ನಡಿ ಚಿತ್ರದಲ್ಲಿ ಪ್ರಭು ಮುಂಡಕರ್, ಕಾಜಲ್ ಕುಂದರ್ ಮತ್ತು ಅನ್ವಿತಾ ಸಾಗರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸಪ್ನಾ ಪಾಟೀಲ್ ಬಂಡವಾಳ ಹೂಡಿದ್ದಾರೆ. ಅಭೀಷೇಕ್ ಎಸ್.ಎನ್ ಸಂಗೀತ ನೀಡಿದರೆ, ಆನಂದರಾಜ್ ವಿಕ್ರಮ್ ರ ಹಿನ್ನಲೆ ಸಂಗೀತವಿದೆ. ಬ್ಲೂ ವೇಲ್ ಗೇಮ್ ಚಟ ಹೇಗೆ ಯುವಕರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಚಿತ್ರ ವಿವರಿಸುತ್ತದೆ.
ಕಾಲೇಜಿಗೆ ಹೊಸದಾಗಿ ಸೇರಿದ ಸ್ಯಾಂಡಿ ತನ್ನ ಕ್ಯಾಂಪಸ್ ನಲ್ಲಿ ನೆಡೆಯುವ ಸರಣಿ ಆತ್ಮಹತ್ಯೆ ಘಟನೆಗಳಿಂದ ವಿಚಲಿತನಾಗುತ್ತಾನೆ. ಆತ್ಮಹತ್ಯೆ ಮಾಡಿಕೊಂಡ ಎಲ್ಲರ ಕೈ ಮೇಲೂ ಒಂದು ವೇಲ್ (ತಿಮಿಂಗಲ) ಟ್ಯಾಟೂ ಇರುತ್ತದೆ. ಒಂದು ಸಲ ಸ್ಯಾಂಡಿಯ ಆತ್ಮೀಯ ಗೆಳತಿ ನೇಹಾ ಕೂಡ ಆತ್ಮಹತ್ಯೆ ಮಾಡಿಕೊಂಡಾಗ ಇದರ ಹಿಂದಿನ ಕಾರಣವನ್ನು ತಿಳಿಯಲು ಹೊರಡುತ್ತಾನೆ. ಆದರೆ ಎಲ್ಲಾ ಸಾಕ್ಷ್ಯಗಳು ಸ್ಯಾಂಡಿಯತ್ತಲೇ ಬೊಟ್ಟು ಮಾಡುತ್ತವೆ..ಹಾಗಾದರೆ ಅವಳನ್ನು ಸ್ಯಾಂಡಿಯೇ ಕೊಂದನಾ ಅಥವಾ ಇದು ಮತ್ತೊಬ್ಬರ ಕುತಂತ್ರವೇ ಎಂಬುದು ಚಿತ್ರದ ಮುಂದಿನ ಕಥೆ.