ರಘುರಾಮ್ ನಿರ್ದೇಶನದ `ಮಿಸ್ಸಿಂಗ್ ಬಾಯ್ 'ಚಿತ್ರ ನಿಜಜೀವನ ಕಥೆಯಾಧಾರಿತವಾಗಿದೆ. ಚಿತ್ರದಲ್ಲಿ ಗುರುನಂದನ್, ಅರ್ಚನಾ ಜಯಕೃಷ್ಣನ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕತೆ
ನಿಶ್ಚಯ್ (ಗುರುನಂದನ್) ಯುರೋಪಿನಲ್ಲಿ ವಾಸಿಸುವ ಯಶಸ್ವಿ ಉದ್ಯಮಿ.ಇವರಿಗೆ ಆಗಾಗ ರೇಲ್ವೇ ಟ್ರ್ಯಾಕ್ ಮತ್ತು ಓಂದು ಅನಾಥಶ್ರಮದ ಕನಸು ಬೀಳುತ್ತಿರುತ್ತದೆ. ಇದರ ಜಾಡನ್ನು ಹಿಡಿದು ಹೋದಾಗ ಅವನಿಗೆ ತಾನು ಭಾರತದ ಓಂದು ಅನಾಥಾಶ್ರಮದಿಂದ ದತ್ತು ಪಡೆದ ಮಗು ಎಂದು ಗೊತ್ತಾಗುತ್ತದೆ.
ತನ್ನ ಪೋಷಕರು ಯಾರೆಂದು ಕಂಡುಹಿಡಿಯಬೇಕೆಂದು ಭಾರತಕ್ಕೆ ಬರುವ ನಿಶ್ಚಯಗೆ ಒಬ್ಬ ಪತ್ರಕರ್ತ,ಒಬ್ಬ ಪೋಲಿಸ್ ಅಧಿಕಾರಿ ಮತ್ತು ಒಬ್ಬ ಕ್ಯಾಬ್ ಡ್ರೈವರ್ ಸಹಾಯ ಸಿಗುತ್ತದೆ. ತನಗೆ ಸಿಗುವ ಸುಳಿವುಗಳ ಮೂಲಕ ಹೇಗೆ ತನ್ನ ಪೋಷಕರನ್ನು ಪತ್ತೆ ಹಚ್ಚುತ್ತಾನೆ ಎಂಬುದು ಚಿತ್ರದ ಕಥೆ.
ಜೈಜಗದೀಶ್,ವಿಜಯಲಕ್ಷ್ಮಿ ಸಿಂಗ್, ರಂಗಾಯಣ ರಘು ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಕೊಲ್ಲ ಪ್ರವೀಣ್ ಮತ್ತು ಕೊಲ್ಲ ಮಹೇಶ್ ನಿರ್ಮಿಸಿದ್ದಾರೆ.