ನಾನು ಮತ್ತು ಗುಂಡ (2020)(U/A)
ನಾನು ಮತ್ತು ಗುಂಡ ಕಥೆ
ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ `ನಾನು ಮತ್ತು ಗುಂಡ' ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ.ಶ್ರೀನಿವಾಸ್ ತಿಮ್ಮಯ್ಯ ನಿರ್ಮಾಣದ ಈ ಚಿತ್ರದ ಮೊದಲ ಟೀಸರ್ ಎಪ್ರಿಲ್ 4,2019 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮುಗ್ದ ನಾಯಿ ಗುಂಡ ಮತ್ತು ಅಟೋ ಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ.
ಒಂದು ದಿನ ಶಂಕ್ರ, ತನ್ನ ಅಟೋದಲ್ಲಿ ಒಂದು ನಾಯಿ ಇರುವುದನ್ನು ನೋಡುತ್ತಾನೆ..ಮೊದಮೊದಲು ಅದನ್ನು ದೂರ ಮಾಡಲು ಪ್ರಯತ್ನ ಮಾಡಿದರೂ, ನಂತರ ಅದರ ಜೊತೆ ಒಂದು ಉತ್ತಮ ಬಂಧ ಬೆಳೆಸಿಕೊಳ್ಳುತ್ತಾನೆ. ಶಂಕ್ರ ಮತ್ತು ಅವನ ನಾಯಿ ಗುಂಡನ ಬಾಂಧವ್ಯ ಊರ ತುಂಬ ಪ್ರಸಿದ್ಧಿ ಪಡೆಯುತ್ತದೆ. ಆದರೆ ಶಂಕ್ರನ ಹೆಂಡತಿಗೆ ಇದು ಹಿಡಿಸುವುದಿಲ್ಲ.. ಈ ಮೂವರ ನಡುವೆ ನೆಡೆಯುವ ಚಿತ್ರಣವೇ ಚಿತ್ರದ ಪ್ರಮುಖ ಕಥಾವಸ್ತು.