ನಾಥೂರಾಮ್ ಚಿತ್ರದಲ್ಲಿ ರಿಷಭ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಕಿರುತೆರೆ ಪ್ರಖ್ಯಾತ ನಿರ್ದೇಶಕ ವಿನು ಬಳಂಜ ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ಹೆಚ್.ಕೆ.ಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥರ ಸಂಗೀತವಿದೆ.ನಾಯಕಿಯಾಗಿ ಮಗಳು ಜಾನಕಿ ಖ್ಯಾತಿ ಗಾನವಿ ಲಕ್ಷಣ ಅಭಿನಯಿಸುತ್ತಿದ್ದಾರೆ.
ಚಿತ್ರದ ಮುಹೂರ್ತ ಡಿಸೆಂಬರ್ 12,2018 ರಂದು ಸರಸ್ವತಿ ನಗರದ `ಶ್ರೀ ವೀರಾಂಜನೇಯ ಭಕ್ತಮಂಡಳಿ ಟ್ರಸ್ಟ್‌ನಲ್ಲಿ ನೇರವೇರಿತು. ಈ ಸಮಯದಲ್ಲಿ ರಕ್ಷಿತ್ ಶೆಟ್ಟಿ ಕೂಡ ಉಪಸ್ಥಿತರಿದ್ದರು.ಅನಂತನಾಗ್,ಅಚ್ಯುತ್ ಕುಮಾರ್, ಶಿವಮಣಿ,ಕಿಶೋರ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ರಿಷಭ್ ಗಾಂಧಿ ತತ್ವ ಅನುಯಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.