ಓ2 ಸಿನಿಮಾವನ್ನು
ಪ್ರಶಾಂತ್ ರಾಜೇಂದ್ರ ಹಾಗೂ
ರಾಘವ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಇದೊಂದು ಮೆಡಿಕಲ್ ಥ್ರಿಲ್ಲರ್ ಕಥೆ ಹೊಂದಿರುವಂತಹ ಸಿನಿಮಾ. ಚಿತ್ರದಲ್ಲಿ ಪ್ರವೀಣ್ ತೇಜ್, ರಾಘವ್ ನಾಯಕ್ ನಾಯಕರಾಗಿ ನಟಿಸಿದ್ದರೆ
ಆಶಿಕಾ ರಂಗನಾಥ್ ನಾಯಕಿ. ಉಳಿದಂತೆ ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್, ಕೆ.ಎಸ್ ಶ್ರೀಧರ್, ಶಾರ್ವರಿ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಹಾಗೂ ನವೀನ್ ಅಕ್ಷಿ ಛಾಯಾಗ್ರಹಣ ಸಿನಿಮಾಗಿದೆ.
ಬಿಡುಗಡೆ: O2 ಸಿನಿಮಾ 2024ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.