ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಒಂಭತ್ತನೇ ದಿಕ್ಕು ಚಿತ್ರದಲ್ಲಿ ಲೂಸ ಮಾದ ಯೋಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಆದಿತಿ ಪ್ರಭುದೇವ ನಟಿಸಿದ್ದರೆ, ಗುರು ದೇಶಪಾಂಡೆ ಬಂಡವಾಳ ಹೂಡಿದ್ದಾರೆ. ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ. ಸಾಯಿ ಕುಮಾರ್, ಪ್ರಶಾಂತ್ ಸಿದ್ಧಿ, ಯೋಗಿ ಸಹೋದರ ಮಹೇಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಥೆ: ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿನ ದೇವಸ್ಥಾನದಿಂದ ಐದು ಕೋಟಿ ಬೆಲೆ ಬಾಳುವ ಕಾಲಭೈರವನ ಮೂರ್ತಿ ಕಳವಾಗುತ್ತದೆ. ಇದೇ ಸಮಯದಲ್ಲಿ ಹಳ್ಳಿಯಲ್ಲಿರುವ ಮಿಲ್ ಓನರ್ ವರದಪ್ಪ ಬೆಂಗಳೂರಿನ ಲೋಕಿಗೆ ಹಣ ನೀಡಿ ವ್ಯವಹಾರ ಕುದುರಿಸಲು ತನ್ನ ಆಪ್ತ ಮತ್ತು ನಂಬಿಕಸ್ತ ಸ್ನೇಹಿತ ವಾಸುದೇವನನ್ನು ಒಂದು ಹಣದ ಭ್ಯಾಗಿನೊಂದಿಗೆ ಬೆಂಗಳೂರಿಗೆ ಕಳಿಸುತ್ತಾನೆ. ಆದರೆ ಬೆಂಗಳೂರಿಗೆ ಹೋದ ವಾಸುದೇವ ನಾಪತ್ತೆಯಾಗುತ್ತಾನೆ. ಹಾಗೇ ಎಲ್ಲಾ ಕಡೆ ಆ ಭ್ಯಾಗಿನದ್ದೇ ಸುದ್ದಿ ಮತ್ತು ಅದನ್ನು ಪಡೆಯಲು ಹಲವರು ಪ್ರಯತ್ನಿಸುತ್ತಾರೆ. ಆ ಭ್ಯಾಗಿನಿಂದ ಕಾಣೆಯಾದ ತನ್ನ ತಂದೆಯನ್ನು , ವಾಸುದೇವನ ಪುತ್ರ ಚೆನ್ನಕೇಶವ ಒಬ್ಬ ಸಣ್ಣ ಕಳ್ಳನ ಸಹಾಯದಿಂದ ತನ್ನ ತಂದೆಯನ್ನು ಹುಡುಕಲು ಆರಂಭಿಸುತ್ತಾನೆ. ಇವೆಲ್ಲಗಳ ಮಧ್ಯ ಇರುವ ಸಂಬಂಧವೇನು ಎಂಬುದು ಚಿತ್ರದ ಕಥೆ.