ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ, ಆದಿ ಸಂಕಲನ ಹಾಗೂ ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ. ಮೈಸೂರು ರಮೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಒಂದು ಸರಳ ಪ್ರೇಮಕಥೆ ಸಿನಿಮಾ 2024ರ ಫೆಬ್ರವರಿ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
ಕಥೆ: ಸಿನಿಮಾದ ನಾಯಕ ಅತಿಶಯ್ (ವಿನಯ್ ರಾಜ್‌ಕುಮಾರ್). ಜೀವನದಲ್ಲಿ ಒಂದೆರಡು ಕನಸು ಇಟ್ಟುಕೊಂಡಿರೋ ವ್ಯಕ್ತಿ. ಒಬ್ಬ ಒಳ್ಳೆಯ ಸಂಗೀತ ನಿರ್ದೇಶಕನಾಗಬೇಕು ಅನ್ನೋದು ಒಂದು ಕನಸಾದರೆ, ಇನ್ನೊಂದು ಮನಮೆಚ್ಚಿನ ಹುಡುಗಿಯನ್ನು ಮದುವೆ ಆಗೋದು. ನಾಯಕ ಈ ಎರಡೂ ಕನಸುಗಳು ಈಡೇರುತ್ತಾ? ಕನಸುಗಳು ಈಡೇರುವ ಹಾದಿಯಲ್ಲಿ ನಾಯಕನಿಗೆ ಎದುರಾಗುವ ಟ್ವಿಸ್ಟ್ ಅಂಡ್ ಟರ್ನ್ ಏನು? ಕನಸುಗಳು ಈಡೇರುತ್ತಾ? ಇಲ್ವಾ? ಅನ್ನೋದೇ 'ಒಂದು ಸರಳ ಪ್ರೇಮಕಥೆ'.
ಒಟಿಟಿ ಬಿಡುಗಡೆ: ಒಂದು ಸರಳ ಪ್ರೇಮಕಥೆ ಸಿನಿಮಾ 2024ರ ಮಾರ್ಚ್ 19ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಯಿತು.