X
ಕಾರ್ತಿಕ್ ಮಹೇಶ್
Actor

ಕಾರ್ತಿಕ್ ಮಹೇಶ್ ಜೀವನ ಚರಿತ್ರೆ

ನಟ ಕಾರ್ತಿಕ್ ಮಹೇಶ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ್ದಾರೆ.  ನಂತರ ನಟನಾಗುವ ಕನಸು ಹೊತ್ತು ಬೆಂಗಳೂರಿನತ್ತ ಮುಖ ಮಾಡಿದ ಇವರು, ಮಾಡಲಿಂಗ್ ಮಾಡುವ ಮೂಲಕ ವೃತ್ತಿ ಜೀವನ ಆರಂಭಿಸಿದರು. 


ಕಿರುತೆರೆ

ಕಾರ್ತಿಕ್ ಮಹೇಶ್‌ಗೆ ಬಾಲ್ಯದಿಂದಲೂ ನಟನೆ ಮಾಡುವ ಕನಸಿತ್ತು. ಹೀಗಾಗಿ ಮಾಡಲಿಂಗ್ ಮಾಡುತ್ತಲೇ  ಹಲವಾರು ಸೀರಿಯಲ್‌ಗಳಿಗೆ ಆಡಿಷನ್ ಕೊಟ್ಟರು. ಬಳಿಕ ಖುಷಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಆ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡರು.  ನಂತರ ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಈ ಸೀರಿಯಲ್ ತೊರೆದಿದ್ದ ಕಾರ್ತಿಕ್, ಕಲರ್ಸ್ ಕನ್ನಡ ಅಂತರಪಟ ಧಾರವಾಹಿಯಲ್ಲಿ 'ರವಿ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. 

 

ಸಿನಿಮಾ

ಕಾರ್ತಿಕ್ ಖುಷಿ ಧಾರವಾಹಿಯಲ್ಲಿ ನಟಿಸುವಾಗ ಸುನೀಲ್ ಪುರಾಣಿಕ್ ಇವರ ತಂದೆಯ ಪಾತ್ರದಲ್ಲಿ ನಟಿಸಿದ್ದರಂತೆ. ನಂತರ ಅವರ ಪುತ್ರ ಸಾಗರ್ ಪುರಾಣಿಕ್ ತಮ್ಮ ನಿರ್ದೇಶನದ 'ಡೊಳ್ಳು' ಸಿನಿಮಾದ ನಾಯಕನಾಗಿ ಇವರನ್ನು ಆಯ್ಕೆ ಮಾಡಿದ್ದರು. ಡೊಳ್ಳು ಚಿತ್ರಕ್ಕಾಗಿ ಕಾರ್ತಿಕ್ ಸ್ವತಃ ಡೊಳ್ಳು ಬಡಿಯೋದನ್ನು ಕಲಿತು ಅದ್ಭುತವಾಗಿ ಅಭಿನಯಿಸಿದ್ದರು. ಕಾರ್ತಿಕ್ ನಾಯಕನಾಗಿ ನಟಿಸದ ಮೊದಲ ಚಿತ್ರವೇ 2022ರ ಜರುಗಿದ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು. 

 


ಬಿಗ್‌ಬಾಸ್‌: ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಭಾಗವಹಿಸಿದ್ದ ಕಾರ್ತಿಕ್ ಮಹೇಶ್ ವಿಜೇತರಾಗಿದ್ದರು. ಅವರಿಗೆ  50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಿತ್ತು.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+