ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ ಸಿನಿಮಾವನ್ನು ವೇಂಪಲ್ಲಿ ಬಾವಾಜಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಜಾಭಾರತ ರಿಯಾಲಿಟಿ ಶೋ ಖ್ಯಾತಿಯ ಜಗ್ಗಪ್ಪ ಮತ್ತು ಸುಶ್ಮಿತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಿರುಂಡೆ ರಘುರಾಮ್, ಗಜೇಂದ್ರ, ರಾಘವಿ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಬಾಲು ಅವರ ಛಾಯಾಗ್ರಹಣ ಹಾಗೂ ಅಲೆಕ್ಸಾ ಹಿನ್ನೆಲೆ ಸಂಗೀತವಿದೆ. ಈ ಸಿನಿಮಾವನ್ನು ಅಪ್ಸರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.