Updated: Monday, February 17, 2020, 09:49 AM [IST]
2018 ರಲ್ಲಿ ಕೆಜಿಎಫ್, ಟಗರು , ಅಯೋಗ್ಯ ಮುಂತಾದ ಬಾಕ್ಸಾಫೀಸ್ ಹಿಟ್ ಚಿತ್ರಗಳ ಜೊತೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಒಂದಲ್ಲಾ ಎರಡಲ್ಲಾ ಮುಂತಾದ ಅತ್ತ್ಯುತ್ತಮ ವಿಮರ್ಶೆ ಪಡೆದ ಚಿತ್ರಗಳು ಬಂದವು. ತಮ್ಮ ಅದ್ಭುತ ಕಥಾವಸ್ತುಗಳಿಂದ ಸಮಾಜಕ್ಕೆ ಹಲವು ಸಂದೇಶ ಒದಗಿಸುವ ಜೊತೆಗೆ ಪ್ರೇಕ್ಷಕ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದವು.
2018 ರಲ್ಲಿ ತೆರೆಕಂಡ ಅದ್ಭುತ ಕಲಾತ್ಮಕ ಮತ್ತು ಅತ್ತ್ಯುತ್ತಮ ವಿಮರ್ಶೆ ಪಡೆದ ಚಿತ್ರಗಳ ಪಟ್ಟಿಯನ್ನು ಕೆಳಗಡೆ ನೀಡಲಾಗಿದೆ.
ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಕರ್ನಾಟಕದ ಗಡಿಭಾಗ ಕಾಸರಗೋಡಿನಲ್ಲಿರುವ ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಅವಲೋಕಿಸಿತು. ಹಾಸ್ಯ ಧಾಟಿಯಲ್ಲಿ ಗಂಭೀರ ಸಮಸ್ಯೆಯನ್ನು ನಿರೂಪಿಸಿದ ಚಿತ್ರ ವಿಮರ್ಶಕರಿಂದ ಬಹುಪರಾಕ್ ಪಡೆಯಿತು.
Critically Acclaimed Kannada Movies Of 2018-Sarkari Hi Pra Shaale Kasaragodu/top-listing/critically-acclaimed-kannada-movies-of2018-sarkari-hi-pra-shaale-kasaragodu-3-984-70.html
ತಾರಾ ಮತ್ತು ದೇವರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹೆಬ್ಬಟ್ ರಾಮಕ್ಕ ಚಿತ್ರ 65 ನೇ ರಾಷ್ಟಪ್ರಶಸ್ತಿ ಪಡೆಯಿತು. ಈ ಚಿತ್ರದಲ್ಲಿ ಓದುಬರಹ ಬರದ ಹೆಣ್ಣುಮಗಳೊಬ್ಬಳು ತನ್ನ ಗಂಡನ ಒತ್ತಾಯಕ್ಕೆ ಮಣಿದು ರಾಜಕೀಯ ಪ್ರವೇಶಿಸಿಸುತ್ತಾಳೆ.
Critically Acclaimed Kannada Movies Of 2018-Hebbet Ramakka/top-listing/critically-acclaimed-kannada-movies-of2018-hebbet-ramakka-3-731-70.html