ಶ್ರೀಕಾಂತ್ ಒಬ್ಬ ಶ್ರೀಮಂತ ಉದ್ಯಮಿ. ಪತ್ನಿಯನ್ನು ಕಳೆದುಕೊಂಡ ಇವನಿಗೆ ಮಗಳು ರೋಷಣಿಯೇ ಆಧಾರ. ಆಕಸ್ಮಿಕವಾಗಿ ಶ್ರೀಕಾಂತ್ ತನಗಿಂತ ವಯಸ್ಸಿನಲ್ಲಿ ಚಿಕ್ಕವಳಿರುವ ಸ್ಮಿತಾಳನ್ನು ಮದುವೆಯಾಗಿ ಮನೆಗೆ ಕರೆತರುತ್ತಾನೆ. ರೋಷಿಣಿ ಕೂಡ ಅಜಯ್ ಎಂಬ ಜಿಮ್ ಟ್ರೇನರ್ ನ್ನು ಪ್ರೀತಿಸುತ್ತಿರುತ್ತಾಳೆ. ಇದೇ ಸಮಯದಲ್ಲಿ ರೋಷಿಣಿ ಸಾಯುತ್ತಾಳೆ, ಮಗಳ ಸಾವು ಕಂಡ ತಂದೆ ಕೂಡ ಸಾಯುತ್ತಾನೆ. ಇಲ್ಲಿಂದ ಚಿತ್ರಕ್ಕೆ ತಿರುವು ಸಿಗುತ್ತದೆ.
ಕೊಲೆಯ ತನಿಖೆ ಮಾಡಲು ಬರುವ ಅಧಿಕಾರಿ ಬಂದಾಗ ಇದೆಲ್ಲದರ ಹಿಂದಿನ ಕಾರಣ ಒಂದುವರೆ ಸಾವಿರ ಕೋಟಿ ಸಂಪತ್ತು ಎಂದು ತಿಳಿಯುತ್ತದೆ.ಕೊಲೆಯಾದ ರೋಷಿಣಿ ಧುತ್ತನೇ ಪ್ರತ್ಯಕ್ಷವಾಗುತ್ತಾಳೆ. ಆಸ್ತಿಗೋಸ್ಕರ ಮೂರು ವ್ಯಕ್ತಿಗಳು ಆಡುವ ಮೈಂಡ್ ಗೇಮ್ ಮತ್ತು ಅದಕ್ಕೆ ಬಲಿಯಾಗುವ ವ್ಯಕ್ತಿಗಳು , ಹೀಗೆ ಚಿತ್ರದ ಕತೆ ಸಾಗುತ್ತಾ ಹೋಗುತ್ತದೆ.