ಪೆಂಟಗನ್ ಸಿನಿಮಾವನ್ನು ರಘು ಶಿವಮೊಗ್ಗ, ಚಂದ್ರ ಮೋಹನ್, ಆಕಾಶ್ ಶ್ರೀವತ್ಸ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ.
ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪೆಂಟಗನ್ ಕಥಾಸಂಗಮ ಚಿತ್ರದಂತೆ ಒಂದು ಸಂಕಲನ ಚಿತ್ರವಾಗಿದೆ. ಐದು ಕಥೆಗಳಿಗೆ ಐದು ನಿರ್ದೇಶಕರ ನಿರ್ದೇಶನವಿದೆ. ಮಣಿಕಂಠ ಕದ್ರಿ ಸಂಗೀತವಿರಲಿದೆ.
ವಿವಾದ: ಈ ಚಿತ್ರದ ಟೀಸರ್ ನಲ್ಲಿ ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಗಿರಾಕಿಗಳು, ರೌಡಿಗಳು ಅಂತೆಲ್ಲಾ ಚಿತ್ರೀಕರಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ, ಅಶ್ವಿನಿ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ಅವರಿಗೆ ಸಿನಿಮಾ ತೋರಿಸಿ ಸ್ಪಷ್ಟಿಕರಣ ನೀಡೋದಾಗಿ ಗುರು ದೇಶಪಾಂಡೆ ಹೇಳಿದ್ದರು.