ಮಣಿರತ್ನಂ ನಿರ್ದೇಶನದ ಬಹುತಾರಾಗಣದ 'ಪೊನ್ನಿಯಿನ್ ಸೆಲ್ವನ್' ಭಾಗ-1 ಚಿತ್ರದಲ್ಲಿ ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ ಇನ್ನೂ ಹಲವಾರು ಮಂದಿ ಸ್ಟಾರ್ ನಟರು ನಟಿಸಿದ್ದರು. ಸಿನಿಮಾದಲ್ಲಿ ವಿಕ್ರಂ, ಆದಿತ್ಯ ಕರಿಕಾಲನ್ ಪಾತ್ರದಲ್ಲಿ, ಐಶ್ವರ್ಯಾ ರೈ ನಂದಿನಿ ಹಾಗೂ ಪಳುವತ್ತಾರಿಯನ್ ಪಾತ್ರದಲ್ಲಿ, ಕಾರ್ತಿ ವಲ್ಲವರಿಯನ್ ವಂದಿಯದೇವನ್ ಪಾತ್ರದಲ್ಲಿ, ತ್ರಿಶಾ ಕುಂಡವಿಯರ್ ಪಿರುತ್ತಾರ್ ಪಾತ್ರಗಳಲ್ಲಿ ಅಭಿನಯಸಿದ್ದರು. ಇವರ ಹೊರತಾಗಿ ಐಶ್ವರ್ಯಾ ಲಕ್ಷ್ಮಿ, ಶೋಭೀತ ಧುಲಿಪಾಡ, ಪ್ರಭು, ಶರತ್‌ಕುಮಾರ್, ವಿಕ್ರಂ ಪ್ರಭು, ಪ್ರಕಾಶ್ ರಾಜ್, ರೆಹಮಾನ್, ಆರ್ ಪಾರ್ತಿಭನ್, ಲಾಲ್, ಕನ್ನಡಿಗ ಕಿಶೋರ್ ಇನ್ನೂ ಹಲವರು ನಟಿಸಿದ್ದಾರೆ.
ರಿಲೀಸ್: ಮಣಿರತ್ನಂ ನಿರ್ದೇಶನದ ಈ ಸಿನಿಮಾ 2022ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಿತ್ತು.