ಪಾಪ್ಕಾರ್ನ್ ಮಂಕಿ ಟೈಗರ್ (2020)(A)
Release date
21 Feb 2020
genre
ಪಾಪ್ಕಾರ್ನ್ ಮಂಕಿ ಟೈಗರ್ ಕಥೆ
ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರ ನಟರಾಕ್ಷಸ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಶನ್ನಲ್ಲಿ ಮೂಡಿ ಬಂದಿದೆ. ಟಗರು ಚಿತ್ರದ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಆ್ಯಕ್ಷನ್,ಕ್ರೈಮ್,ಥ್ರಿಲ್ಲರ್ ಕಥಾನಕವುಳ್ಳ ಈ ಚಿತ್ರದಲ್ಲಿ ನಾಯಕಿಯರಾಗಿ ನಿವೇದಿತಾ,ಅಮೃತಾ,ಸಪ್ತಮಿ ಕಾಣಿಸಿಕೊಂಡಿದ್ದಾರೆ. ಸೂರಿ ಗರಡಿಯಲ್ಲಿ ಡಾಲಿ ಮತ್ತೊಮ್ಮೆ ಭಯಾನಕವಾಗಿ ಘರ್ಜಿಸಿದ್ದಾನೆ.
ಜನೇವರಿ 7, 2020 ರಂದು ಚಿತ್ರದ ಟೀಸರ್ ಬಿಡುಗಡೆಯಾಯಿತು. ಟೀಸರ್ ಚಿತ್ರದಲ್ಲಿರಬಹುದಾದ ರಕ್ತದೋಕುಳಿಯ ಒಂದು ಚಿಕ್ಕ ಝಲಕ್ ನೀಡಿತು. ಚಿತ್ರಕ್ಕೆ ಸುಧೀರ್ ಕೆ.ಎಂ ಬಂಡವಾಳ ಹೂಡಿದ್ದರೆ, ಚರಣರಾಜ್ ಸಂಗೀತ ನೀಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದೆ. ಮಂಕಿ ಸೀನ ಅಲಿಯಾಸ್ ಟೈಗರ್ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಏರಿಳಿತ ಸಿನಿಮಾ ಕಥೆಯಾಗಿದೆ. ಮೆಕಾನಿಕ್ ಸೀನ ರೌಡಿಯಾಗಿ ಮುಂದೆ ಏನೆಲ್ಲ ಆಗುತ್ತಾನೆ ಎನ್ನುವುದ ಸಿನಿಮಾದ ಒನ್ ಲೈನ್ ಸ್ಟೋರಿ.

**Note:Hey! Would you like to share the story of the movie ಪಾಪ್ಕಾರ್ನ್ ಮಂಕಿ ಟೈಗರ್ with us? Please send it to us ([email protected]).