ಪ್ರತ್ಯರ್ಥ ಸಿನಿಮಾವನ್ನು ಅರ್ಜುನ್ ಕಾಮತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಮ್‌ನಾಥ್ ಶಾನಭೋಗ್, ಅಕ್ಷಯ್ ಕಾರ್ಕಳ, ಶ್ರುತಿ ಚಂದ್ರಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುಮನ್ ತಲ್ವಾರ್, ನವೀನ್ ಡಿ ಪಡೀಲ್, ರಮೇಶ್ ಭಟ್, ದೀಪಕ್ ರೈ ಮುಂತಾದವರು ತಾರಾಗಣದಲ್ಲಿದ್ದಾರೆ. ಸುನಾದ್ ಗೌತಮ್ ಸಂಗೀತ ಹಾಗೂ ವಿನುತ್ ಛಾಯಾಗ್ರಹಣ ಸಿನಿಮಾಗಿದೆ.