ನಿಖಿಲ್ ಕುಮಾರಸ್ವಾಮಿ ಅಭಿನಯದ ಹೊಸ ಸಿನಿಮಾ ಪ್ರೊಡಕ್ಷನ್ ನಂಬರ್ 28. ತಮಿಳಿನಲ್ಲಿ ಬೋಗನ್, ಭೂಮಿ ಮತ್ತು ರೋಮಿಯೋ ಅಂಡ್ ಜ್ಯೂಲಯೆಟ್‌ನಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಲಕ್ಷ್ಣಣ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
ತೆಲುಗಿನ ರಂಗಬಲಿ ಚಿತ್ರದಲ್ಲಿ ನಟಿಸಿದ್ದ ಯುಕ್ತಿ ಥರೇಜಾ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟ ಕೋಮಲ್ ಕೂಡ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಅಜನೀಶ್ ಲೋಕೇಶ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದು, ವಂಶಿ ಪಚ್ಚಿಪುಲಸು ಛಾಯಾಗ್ರಣ ಮಾಡಲಿದ್ದಾರೆ. ರಘು ನಡುವಳ್ಳಿ ಸಂಭಾಷಣೆ ಇರಲಿದೆ.