ಸೈಕಿಕ್ ಸಿನಿಮಾವನ್ನು
ಪುಷ್ಕರ್ ಗಿರಿಗೌಡ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಇವರು ಈ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರದಲ್ಲಿ
ಸರ್ದಾರ ಸತ್ಯ, ಹಂಸಾ ಪ್ರತಾಪ್, ರಮೇಶ್ ಭಟ್,
ರಥಸಪ್ತಮಿ ಅರವಿಂದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಉಳಿದಂತೆ ಕೈಲಾಶ್ ದೇವ್, ರೇಷ್ಮ ಲಿಂಗರಾಜಪ್ಪ, ರೋಹಿತ್ ನಾಗೇಶ್, ನಿಶ್ಚಿತ ಗೌಡ ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ. ತ್ಯಾಗರಾಜ್ ಸಂಘಿತ, ಸಿನಿಟೆಕ್ ಸೂರಿಯವರ ಛಾಯಾಗ್ರಹಣ ಸಿನಿಮಾಗಿದೆ. ಚೇತನ್ ಮಂಜುನಾಥ್ ನಿರ್ಮಾಣದ ಈ ಚಿತ್ರಕ್ಕೆ ವೈ ಎಸ್ ಶ್ರೀಧರ್ ಸಂಕಲನ ಮಾಡಿದ್ದಾರೆ.
ಬಿಡುಗಡೆ: ಸೈಕಿಕ್ ಸಿನಿಮಾ 2023ರ ಡಿಸೆಂಬರ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.