ಪುಷ್ಪ ಕಥೆ: ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್‌ಗೆ 'ಪುಷ್ಪ'ರಾಜ್ ಸವಾಲು ಹಾಕುವುದರೊಂದಿಗೆ ಮೊದಲ ಭಾಗ ಮುಕ್ತಾಯವಾಗಿತ್ತು. ಪಾರ್ಟ್-2ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಸಿಂಡಿಕೇಟ್ ಪ್ರೆಸಿಡೆಂಟ್ ಆಗಿ 'ಪುಷ್ಪ' ಮೆರೆಯೋಕೆ ಶುರು ಮಾಡಿದ್ದಾನೆ. ಹಂತ ಹಂತವಾಗಿ ಬೆಳೆದು ಬಹಳ ಶ್ರೀಮಂತನಾಗಿದ್ದಾನೆ. ಅವನಿಗಿಂತ ಅವನ ಹಣವೇ ಹೆಚ್ಚು ಮಾತನಾಡುತ್ತದೆ. ಕೊನೆಗೆ ಒಂದು ಪೊಲೀಸ್ ಠಾಣೆಯ ಅಷ್ಟು ಸಿಬ್ಬಂದಿಯನ್ನು ಕೊಂಡುಕೊಂಡು ಶೇಖಾವತ್‌ಗೆ ತಿರುಗೇಟು ಕೊಡುತ್ತಾನೆ. ಇತ್ತ ಶ್ರೀವಲ್ಲಿ ಜೊತೆ ಸಂಸಾರ ಶುರುವಾಗಿದೆ. ಆಕೆ ಕೇಳಿದ ಸಣ್ಣ ಆಸೆ ಈಡೇರಿಸಲು ಪುಷ್ಪರಾಜ್ ರಾಜ್ಯದ ಸಿಎಂ ಅನ್ನೇ ಬದಲಿಸುವ ಸಾಹಸಕ್ಕೆ ಕೈಹಾಕುತ್ತಾನೆ. ಅದಕ್ಕೆ ದೊಡ್ಡಮೊತ್ತದ ಹಣ ಬೇಕು. ಒಂದು ದೊಡ್ಡ ಡೀಲ್ ಮಾಡಿ ಹಣ ಹೊಂದಿಸಲು ಮುಂದಾಗುತ್ತಾನೆ.
ಈ ಹಾದಿಯಲ್ಲಿ ಶೇಖಾವತ್‌ಗೆ ಚಳ್ಳೆಹಣ್ಣು ತಿನ್ನಿಸಿ ಪುಷ್ಪ ಅಸಲು ತಗ್ಗೊದೇಇಲ್ಲ ಎಂದು ಡೈಲಾಗ್ ಹೊಡಿತ್ತಾನೆ. ಅಲ್ಲಿಗೆ ಮೊದಲಾರ್ಧ ಮುಕ್ತಾಯವಾಗುತ್ತದೆ. ದ್ವಿತಿಯಾರ್ಧದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಕಥೆ ಪಕ್ಕಕ್ಕೆ ಸರಿಯುತ್ತದೆ. 'ಪುಷ್ಪ'ರಾಜ್ ಫ್ಯಾಮಿಲಿ ಕಥೆ ಮುಂದಕ್ಕೆ ಬರುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಪುಷ್ಪರಾಜ್‌ಗೆ ಮನೆತನದ ಹೆಸರು ಸಿಗಲ್ಲ. ಆ ಕೊರಗಿಗೆ ಕಾರಣ ಅಣ್ಣ. ಅವನು ನನ್ನ ತಮ್ಮ ಅಲ್ಲ ಎನ್ನುತ್ತಿದ್ದ ಅದೇ ಅಣ್ಣ ಕೊನೆಗೆ ನೀನೇ ನನ್ನ ತಮ್ಮ ಎಂದು ಒಪ್ಪಿಕೊಳ್ಳುವುದರೊಂದಿಗೆ 'ಪುಷ್ಪ'-2 ಕಥೆ ಮುಗಿಯುತ್ತದೆ.
ಬಿಡುಗಡೆ: ಪುಷ್ಪ 2 ಸಿನಿಮಾ 2024ರ ಡಿಸೆಂಬರ್ 5ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಯಿತು.