X
ಪುಷ್ಪ 2

ಪುಷ್ಪ 2

Action | 05 Dec 2024 | U/A | 200 Mins
Kannada

2.5 /5 Users

0 /5 Filmibeat

ಪುಷ್ಪ 2 ಕಥೆ

ಪುಷ್ಪ 2 ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇದು 2021ರಲ್ಲಿ ಬಿಡುಗಡೆಯಾದ ಪುಷ್ಪ 1ರ ಸೀಕ್ವೆಲ್. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ಫಾಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುನೀಲ್, ರಾವ್ ರಮೇಶ್, ಸಾಯಿ ಪಲ್ಲವಿ, ಪ್ರಕಾಶ್ ರಾಜ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ, ನವೀನ್ ನೂಲಿ ಸಂಕಲನ ಹಾಗೂ ಮಿರೋಸ್ಲಾ ಕುಬಾ ಬ್ರೋಜೆಕ್ ಛಾಯಾಗ್ರಹಣ ಸಿನಿಮಾಗಿದೆ. ಪುಷ್ಪ 2  ಚಿತ್ರವನ್ನು ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಲಿ ಹಾಗೂ ಸಿ ವಿ ಮೋಹನ್ ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪುಷ್ಪ ಕಥೆ: ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್‌ಗೆ 'ಪುಷ್ಪ'ರಾಜ್ ಸವಾಲು ಹಾಕುವುದರೊಂದಿಗೆ ಮೊದಲ ಭಾಗ ಮುಕ್ತಾಯವಾಗಿತ್ತು. ಪಾರ್ಟ್‌-2ನಲ್ಲಿ ರಕ್ತ ಚಂದನ ಸ್ಮಗ್ಲಿಂಗ್ ಸಿಂಡಿಕೇಟ್ ಪ್ರೆಸಿಡೆಂಟ್ ಆಗಿ 'ಪುಷ್ಪ' ಮೆರೆಯೋಕೆ ಶುರು ಮಾಡಿದ್ದಾನೆ. ಹಂತ ಹಂತವಾಗಿ ಬೆಳೆದು ಬಹಳ ಶ್ರೀಮಂತನಾಗಿದ್ದಾನೆ. ಅವನಿಗಿಂತ ಅವನ ಹಣವೇ ಹೆಚ್ಚು ಮಾತನಾಡುತ್ತದೆ. ಕೊನೆಗೆ ಒಂದು ಪೊಲೀಸ್ ಠಾಣೆಯ ಅಷ್ಟು ಸಿಬ್ಬಂದಿಯನ್ನು ಕೊಂಡುಕೊಂಡು ಶೇಖಾವತ್‌ಗೆ ತಿರುಗೇಟು ಕೊಡುತ್ತಾನೆ. ಇತ್ತ ಶ್ರೀವಲ್ಲಿ ಜೊತೆ ಸಂಸಾರ ಶುರುವಾಗಿದೆ. ಆಕೆ ಕೇಳಿದ ಸಣ್ಣ ಆಸೆ ಈಡೇರಿಸಲು ಪುಷ್ಪರಾಜ್ ರಾಜ್ಯದ ಸಿಎಂ ಅನ್ನೇ ಬದಲಿಸುವ ಸಾಹಸಕ್ಕೆ ಕೈಹಾಕುತ್ತಾನೆ. ಅದಕ್ಕೆ ದೊಡ್ಡಮೊತ್ತದ ಹಣ ಬೇಕು. ಒಂದು ದೊಡ್ಡ ಡೀಲ್ ಮಾಡಿ ಹಣ ಹೊಂದಿಸಲು ಮುಂದಾಗುತ್ತಾನೆ.   ಈ ಹಾದಿಯಲ್ಲಿ ಶೇಖಾವತ್‌ಗೆ ಚಳ್ಳೆಹಣ್ಣು ತಿನ್ನಿಸಿ ಪುಷ್ಪ ಅಸಲು ತಗ್ಗೊದೇಇಲ್ಲ ಎಂದು ಡೈಲಾಗ್ ಹೊಡಿತ್ತಾನೆ. ಅಲ್ಲಿಗೆ ಮೊದಲಾರ್ಧ ಮುಕ್ತಾಯವಾಗುತ್ತದೆ. ದ್ವಿತಿಯಾರ್ಧದಲ್ಲಿ ರಕ್ತಚಂದನ ಸ್ಮಗ್ಲಿಂಗ್ ಕಥೆ ಪಕ್ಕಕ್ಕೆ ಸರಿಯುತ್ತದೆ. 'ಪುಷ್ಪ'ರಾಜ್ ಫ್ಯಾಮಿಲಿ ಕಥೆ ಮುಂದಕ್ಕೆ ಬರುತ್ತದೆ. ಎಷ್ಟೇ ಹಣ ಸಂಪಾದಿಸಿದರೂ ಪುಷ್ಪರಾಜ್‌ಗೆ ಮನೆತನದ ಹೆಸರು ಸಿಗಲ್ಲ. ಆ ಕೊರಗಿಗೆ ಕಾರಣ ಅಣ್ಣ. ಅವನು ನನ್ನ ತಮ್ಮ ಅಲ್ಲ ಎನ್ನುತ್ತಿದ್ದ ಅದೇ ಅಣ್ಣ ಕೊನೆಗೆ ನೀನೇ ನನ್ನ ತಮ್ಮ ಎಂದು ಒಪ್ಪಿಕೊಳ್ಳುವುದರೊಂದಿಗೆ 'ಪುಷ್ಪ'-2 ಕಥೆ ಮುಗಿಯುತ್ತದೆ.  ಬಿಡುಗಡೆ:  ಪುಷ್ಪ 2 ಸಿನಿಮಾ 2024ರ ಡಿಸೆಂಬರ್ 5ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ  ಆಯಿತು.
Read More

ಪುಷ್ಪ 2 ಕಲಾವಿದರು ಮತ್ತು ಸಿಬ್ಬಂದಿ

ಪುಷ್ಪ 2 ಕ್ರೂ ಮಾಹಿತಿ

ನಿರ್ದೇಶಕ ಸುಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ದೇವಿ ಶ್ರೀ ಪ್ರಸಾದ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪುಷ್ಪ 2 ವಿಮರ್ಶಕರ ವಿಮರ್ಶೆ

kannada.filmibeat.com
ನಿರ್ದೇಶಕ ಸುಕುಮಾರ್ ಹಿಂದಿನ ತಮ್ಮ ಸಿನಿಮಾಗಳಲ್ಲಿ ಕಥೆಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಆದರೆ ಇಲ್ಲಿ ಬರೀ ಪುಷ್ಪರಾಜ್ ಬಿಲ್ಡಪ್ ಹೈಲೆಟ್ ಆಗಿದೆ

ಪುಷ್ಪ 2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • Excellent

×
2.5 /5 Your Rating

ಪುಷ್ಪ 2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+