ಚಿತ್ರದಲ್ಲಿ ನಾಯಕ ಸಂತೋಷ್ ಚಿತ್ರನಟನಾಗಬೇಕೆಂಬ ಹಂಬಲದಲ್ಲಿ ನೆಡೆಯುತ್ತಿರುವಾಗ ನಾಯಕಿ ರಕ್ಷಾ ಶೆಣೈ ಪ್ರೀತಿಯಲ್ಲಿ ಆಕಸ್ಮಿಕವಾಗಿ ಬೀಳುತ್ತಾನೆ. ತನ್ನ ಪ್ರೀತಿಯ ಜೊತೆ ಬದುಕು ಕಟ್ಟಿಕೊಳ್ಳಬೇಕಾ ಅಥವಾ ತನ್ನ ಕನಸಿನ ಬೆನ್ನು ಹತ್ತಬೇಕಾ ಎಂಬ ಗೊಂದಲದಲ್ಲಿ ಸಂತೋಷ್ ಕಳ್ಳತನ ಮಾಡಲು ಆರಂಭಿಸುತ್ತಾನೆ. ಇಲ್ಲಿ ಇವನಿಗೆ ಶೃತಿ ಮತ್ತು ನಕುಲ್ ಪರಿಚಯವಾಗುತ್ತಾರೆ. ಇವರಿಬ್ಬರೂ ತಮ್ಮ ಸ್ವಾರ್ಥಕ್ಕಾಗಿ ನಾಯಕನನ್ನು ಬಳಸಿಕೊಂಡಾಗ ,ನಾಯಕ ಈ ಬದುಕಿನ ರೇಸಿನಲ್ಲಿ ಸೋತು ಕೊನೆಗೆ ಬಲಿಪಶುವಾಗುತ್ತಾನೆ.
ನಾಯಕನ ಸಾವಿನ ರಹಸ್ಯವನ್ನು ಬಯಲು ಮಾಡಲು ಪೋಲಿಸ್ ಆಧಿಕಾರಿ ದಿವಾಕರ್ ಅಖಾಡಕ್ಕೆ ಧುಮುಕ್ಕುತ್ತಾನೆ. ಹೇಗೆ ದಿವಾಕರ್ ಈ ಸಾವಿನ ರಹಸ್ಯ ಬಯಲು ಮಾಡುತ್ತಾನೆ ಎಂಬುದು ಚಿತ್ರದ ಮುಂದಿನ ಕಥೆ.