ರಾಜು ಜೇಮ್ಸ ಬಾಂಡ್ ಹಾಸ್ಯಪ್ರಧಾನ ಕನ್ನಡ ಸಿನಿಮಾ. ದೀಪಕ್ ಮಧುವನಹಳ್ಳಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಗುರುನಂದನ್ ನಾಯಕನಾಗಿ ಮತ್ತು ಮೃದುಲ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಚಿಕ್ಕಣ್ಣ, ಸಾಧು ಕೋಕಿಲ, ರವಿಶಂಕರ್, ಅಚ್ಯುತ್ ಕುಮಾರ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಸಿನಿಮಾಗಿದೆ. ಚಿತ್ರವನ್ನು ಮಂಜುಮಾಥ್ ವಿಶ್ವಕರ್ಮ ಹಾಗೂ ಕಿರಣ್ ಭಾರತೂರ್ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ರಾಜು ಜೇಮ್ಸ ಬಾಂಡ್ 2025ರ ಫೆಬ್ರವರಿ 14ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.