twitter

    ರಂಗನಾಯಕಿ ಕಥೆ

    ಹಿನ್ನಲೆ - ದಯಾಳ್ ಪದ್ಮನಾಭನ್ ನಿರ್ದೇಶನದ `ರಂಗನಾಯಕಿ' ಚಿತ್ರದಲ್ಲಿ ಆದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್, ತ್ರಿವಿಕ್ರಮ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಎಸ್.ವಿ.ನಾರಾಯಣ ಸ್ವಾಮಿ ಬಂಡವಾಳ ಹೂಡಿದ್ದರೆ, ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ಟ್ರೇಲರ್ ಸೆಪ್ಟಂಬರ್ 3 ರಂದು ಬಿಡುಗಡೆಯಾಯಿತು, ಈ ಚಿತ್ರಕ್ಕೆ ನಿರ್ದೇಶಕರು ಭಾಗ 1 - ವರ್ಜಿನಿಟಿ ಅಂತ ಹೆಸರಿಟ್ಟಿದ್ದಾರೆ. ಯುವತಿಯೊಬ್ಬಳು ಲೈಂಗಿಕ ಕಿರುಕಳಕ್ಕೆ ಬಲಿಯಾಗಿ, ನಂತರ ತಾನು ನ್ಯಾಯಕ್ಕಾಗಿ ಹೋರಾಡುವಾಗ ಎದುರಾಗುವ ತುಮುಲಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

     

    ಕಥೆ- ರಂಗನಾಯಕಿ (ಅದಿತಿ ಪ್ರಭುದೇವ) ಸಂಗೀತ ಶಿಕ್ಷಕಿ. ಶಾಲೆಗೆ ಹೋಗಿ ಸಂಗೀತ ಪಾಠ ಮಾಡುವ ಈಕೆ ಸಂಗೀತದಂತೆ ಸಿಹಿಯಾದ ಹುಡುಗಿ. ಅದೇ ಶಾಲೆಯ ನಾಟಕದ ಶಿಕ್ಷಕ ಹಾಗೂ ಗಣಿತ ಶಿಕ್ಷಕ ಆಕೆಯನ್ನು ಪ್ರೀತಿಸುತ್ತಾರೆ. ಈ ಇಬ್ಬರಲ್ಲಿ ಮೊದಲು ಪ್ರೀತಿ ಹೇಳುವವನಿಗೆ ರಂಗನಾಯಕಿ ಜೋಡಿಯಾಗುತ್ತಾಳೆ. ಮದುವೆ ಆಗಬೇಕು ಎಂದು ನಿರ್ಧಾರ ಮಾಡುವ ಈಕೆಯ ಬದುಕಿನಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ.

    ಮದುವೆ ಆಗಲು ಸಿದ್ಧವಾಗಿರುವ ರಂಗನಾಯಕಿ ಮೇಲೆ ಅತ್ಯಾಚಾರ ಆಗುತ್ತದೆ. ಆ ಕೆಟ್ಟ ಘಟನೆಯ ನಂತರ ‌ಆಕೆ ಹೇಗೆ ಅದರಿಂದ ಹೊರ ಬರುತ್ತಾಳೆ, ಸುತ್ತ ಮುತ್ತ ಇರುವವರು ಆಕೆಯನ್ನು ಹೇಗೆ ಸ್ವೀಕರಿಸುತ್ತಾರೆ. ಸಮಾಜ ಆಕೆಯನ್ನು ಯಾವ ರೀತಿ ನೋಡುತ್ತದೆ, ಕೊನೆಗೆ ರಂಗನಾಯಕಿ ಹೇಗೆ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾಳೆ ಎನ್ನುವುದು ಚಿತ್ರದ ಕಥೆ.

    **Note:Hey! Would you like to share the story of the movie ರಂಗನಾಯಕಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X