ರೋಹಿತ್ ಪಡಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರತ್ನನ್ ಪ್ರಪಂಚ ಚಿತ್ರದಲ್ಲಿ ಡಾಲಿ ಧನಂಜಯ್ ಮತ್ತು ರೆಬಾ ಮೋನಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕೆಜಿರ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಶ್ರೀಶಾ ಕುಡವಳ್ಳಿ ಛಾಯಾಗ್ರಹಣ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತವಿದೆ. ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಆಕ್ಟೋಬರ್ 22 ರಂದು ಬಿಡುಗಡೆಯಾಯಿತು.
ಕಥೆ: ಈ ಚಿತ್ರ ಮೂವತ್ತರ ಆಸುಪಾಸಿನಲ್ಲಿರುವ ಮಧ್ಯಮ ವರ್ಗದ ರತ್ನಾಕರನ ಜೀವನವನ್ನು ಹೇಳುತ್ತದೆ. ತನ್ನ ಸ್ನೇಹಿತರೆಲ್ಲ ಲೈಫಿನಲ್ಲಿ ಸೆಟಲ್ ಆಗಿರುವ ಸಮಯದಲ್ಲಿ, ರತ್ನಾಕರ ಮಾತ್ರ ಇನ್ನೂ ತನ್ನ ಬದುಕನ್ನು ದಾರಿಗೆ ತರುವಲ್ಲಿಯೇ ಪ್ರಯತ್ನಿಸುತ್ತಿರುತ್ತಾನೆ. ತಾಯಿಯೊಂದಿಗೆ ವಾಸಿಸುವ ರತ್ನಾಕರನ ಬದುಕನ್ನು ಒಂದು ಫೋನ್ ಕರೆ ಬದಲಿಸುತ್ತದೆ. ಇಲ್ಲಿಂದ ಆರಂಭವಾಗುವ ರತ್ನನ ಪಯಣದಲ್ಲಿ ಹಲವಾರು ಏಳು-ಬೀಳುಗಳು ಕಾಣಸಿಗುತ್ತವೆ.