ಸಲಗ ಕಥೆ

  `ಸಲಗ' ಚಿತ್ರದಲ್ಲಿ   ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಭೂಗತ ಲೋಕದ ಸಾಹಸಪ್ರಧಾನ ಕಥೆಯುಳ್ಳ ಈ ಚಿತ್ರದ ಕಥೆಯನ್ನು ದುನಿಯಾ ವಿಜಯ್ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಟಗರು ಚಿತ್ರದ ಬಹುತೇಕ ಕಲಾವಿದರು ಮತ್ತು ಚಿತ್ರತಂಡ ಈ ಚಿತ್ರದಲ್ಲಿ ಕೆಲಸ ಮಾಡಿದೆ. ಮಾಸ್ತಿ ಚಿತ್ರಕ್ಕೆ ಸಂಭಾಷಣೆ ಬರೆದರೆ, ಚರಣರಾಜ್ ಸಂಗೀತ ನೀಡಿದ್ದಾರೆ.

  ಕಥೆ: 'ಸಲಗ' ಹೆಸರಿನ ರೌಡಿಯೊಬ್ಬ ತನ್ನ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ಕೊಲ್ಲಲು ಹೊರಟಿದ್ದಾನೆ. ಅವನಿಗೆ ಅವನಂಥೆಯೇ ಖಡಕ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಎದುರಾಗುತ್ತಾನೆ. ಈ ರೌಡಿ-ಪೊಲೀಸ್ ಆಟದಲ್ಲಿ ಜಯ ಯಾರಿಗೆ? ಎದುರಾಳಿಗಳನ್ನು ಕೊಲ್ಲಲು ಸಲಗನಿಗೆ ಇರುವ ಕಾರಣಗಳೇನು? 'ಸಲಗ' ಯಶಸ್ವಿಯಾಗುತ್ತಾನಾ? ಸಲಗನನ್ನು ಪೊಲೀಸ್ ಅಧಿಕಾರಿ ತಡೆಯುತ್ತಾನಾ? ಇದು ಸಲಗ ಚಿತ್ರ ಒನಲೈನ್ ಸ್ಟೋರಿ.

  ಡಾಲಿ ಧನಂಜಯ್, ಕಾಕ್ರೋಚ್ ಸುಧಿ ,ಯಶ್ವಂತ್ ಶೆಟ್ಟಿ ಮುಂತಾದವರು ವಿಜಯ್ ಗೆ ಸಾಥ್ ನೀಡಿದ್ದಾರೆ.ಈ ಚಿತ್ರದಲ್ಲಿ ಡಾಲಿ ಧನಂಜಯ್ ಖಾಕಿ ತೊಟ್ಟು ಖಡಕ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದಾರೆ.ಚಿತ್ರದ ಪೋಟೋಶೂಟ್ ನ ಪೋಟೊಗಳು ಹೊರಬಂದಾಗ ಚಿತ್ರದ ಕಥೆ ರೌಡಿ ಶೀಟರ್ ಸೈಲಂಟ್ ಸುನೀಲ್ ಜೀವನಾಧಾರಿತವಾಗಿದೆಯಾ ಎಂಬ ಕುತುಹೂಲ ಕೆರಳಿಸಿದ್ದವು. 
  **Note:Hey! Would you like to share the story of the movie ಸಲಗ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X