X
ಸಪ್ತ ಸಾಗರದಾಚೆ ಎಲ್ಲೋ
Drama | 01 Sep 2023 | U/A | 142 Mins
Kannada

ಸಪ್ತ ಸಾಗರದಾಚೆ ಎಲ್ಲೋ ಕಥೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬೀರಬಲ್ ಚಿತ್ರದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚೈತ್ರಾ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಪರವಃ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದಾರೆ. 


ಕಥೆ: ಬಡ ಮಧ್ಯಮ ವರ್ಗದ ಇಬ್ಬರು ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಸುಮುದ್ರದ ತೀರದಲ್ಲಿ ಸುಂದರವಾದ ಮನೆ ಕಟ್ಟಿಕೊಳ್ಳಬೇಕು ಅನ್ನೋ ಆಸೆ. ಆ ಕನಸಿಗೆ ಅದರದ್ದೇ ಆದ ಬೆಲೆ ಇರುತ್ತೆ. ಅದನ್ನು ಸಂಪಾಧಿಸಲು ಹೋದ ಹೀರೊ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೈಲು, ಪ್ರೀತಿ, ರೋಧನೆ, ವೇದನೆ, ಭಾವುಕತೆ ಪ್ರೇಮಿಗಳಿಬ್ಬ ಬಾಳಲ್ಲಿ ಹೆಣೆದುಕೊಳ್ಳುತ್ತಾ ಸಾಗುತ್ತೆ. ಮುಂದೇನಾಗುತ್ತೆ? ಪ್ರೇಮಿಗಳ ಪಾಡೇನು? ಈ ಕಥೆಯ ವಿಲನ್ ಯಾರು? ಎಂಬುದೇ ಸಿನಿಮಾದ ಒನ್‌ಲೈನ್ ಕಥೆ. 


ಬಿಡುಗಡೆ: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಮೂಡಿಬರಲಿದೆ. ಮೊದಲನೇ ಭಾಗ 2023ರ ಸೆಪ್ಟಂಬರ್ 1 ರಂದು ಬಿಡುಗಡೆಯಾಗಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+