ದೇವಿ ಪ್ರಸಾದ್ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ವಿಜಯ್ ರಾಘವೇಂದ್ರರ 50 ನೇ ಚಿತ್ರ. ಚಿತ್ರಕ್ಕೆ ದೇವಿಪ್ರಸಾದ್ ಜೊತೆ ಸಾತ್ವಿಕ್ ಹೆಬ್ಬಾರ್ ಮತ್ತು ಎಂ.ಆರ್.ಪಿ ಬಂಡವಾಳ ಹೂಡಿದ್ದಾರೆ. ಗಗನ್ ಬಡೇರಿಯಾ ಸಂಗೀತ ಮತ್ತು ಶಶಾಂಕ್ ನಾರಾಯಣ ಸಂಕಲನ ಚಿತ್ರಕ್ಕಿದೆ.
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಒಂದು ದಿನ ಮುನ್ನವೇ ಆಗಸ್ಟ್ 15, 2021 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡದಲ್ಲಿ ಇದೊಂದು ವಿನೂತನ ಪ್ರಯೋಗವಾಗಲಿದೆ.