ಸ್ಮರಾಮಿ ಸಿನಿಮಾವನ್ನು ಚೊಚ್ಚಲ ಬಾರಿಗೆ ಶಿವರಾಮಕೃಷ್ಣ ನಿರ್ದೇಶನ ಮಾಡಿದ್ದಾರೆ. ಭಿನ್ನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಬಹುತೇಕ ಹೊಸ ಮುಖಗಳೇ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ತಾಜಾ ಕಥೆ ಜೊತೆಗೆ ಒಂದಿಷ್ಟು ಕಮರ್ಷಿಯಲ್ ಅಂಶಗಳಿವೆ. ಎಸ್ ಆರ್ ಆರ್ ಇಂಟರ್ ಪ್ರೈಸಸ್ ಲಾಂಛನದಲ್ಲಿ ಕೆ.ರವಿಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ನಿರ್ದೇಶಕರೇ ಈ ಚಿತ್ರದ ನಾಯಕ. ನಂದಿನಿ ನಟರಾಜ್ ಸಿನಿಮಾದ ನಾಯಕಿ. ಇವರ ಜೊತೆಗೆ ಗಿರೀಶ್ ಜತ್ತಿ, ಚಿತ್ಕಲಾ ಬಿರಾದಾರ್, ಎಂ ಕೆ ಮಠ. ಪಿ ಡಿ ಪ್ರೇಮ್ ತಾರಾಗಣವಿದೆ.