ಸೂರಿ ಲವ್ಸ್ ಸಂಧ್ಯಾ ಸಿನಿಮಾವನ್ನು ಯಾದವ್ ರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಾಶಿನಾಥ್ ಪುತ್ರ ಅಭಿಮಾನ್ಯು ಕಾಶಿನಾಥ್ ನಾಯಕನಾಗಿ ಹಾಗೂ ಅಪೂರ್ವ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರದೀಪ್ ಕಬ್ರಾ, ಪ್ರತಾಪ್ ನಾರಾಯಣ್, ಜಯ ರಾಮಣ್ಣ ಮುಂತಾದವರು ತಾರಾಗಣದಲ್ಲಿದ್ದಾರೆ. ಎಸ್ ಎನ್ ಅರುಣಗಿರಿ ಸಂಗೀತ, ಅಲ್ಲಾಕ ಶ್ರೀನಿವಾಸ್ ಛಾಯಾಗ್ರಹಣ ಹಾಗೂ ಸಿದ್ಧಾರ್ಥ್ ಆರ್ ನಾಯಲ್ ಸಂಕಲನ ಸಿನಿಮಾಗಿದೆ.