ಟಗರು ಪಲ್ಯ ಸಿನಿಮಾವನ್ನು ಉಮೇಶ್ ಕೆ ಕೃಪಾ ನಿರ್ದೇಶನ ಮಾಡಿದ್ದು, ನಾಗಭೂಷಣ್ ಎನ್.ಎಸ್ ನಾಯಕನಾಗಿ ನಟಿಸುತ್ತಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಈ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ತಾರಾ, ಚಿತ್ರ ಶೆಣೈ ತಾರಾಗಣದಲ್ಲಿದ್ದಾರೆ. ಚಿತ್ರವನ್ನು ನಟರಾಕ್ಷಸ ಧನಂಜಯ್ ತಮ್ಮ 'ಡಾಲಿ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಈ ಸಿನಿಮಾಗೆ ಸಂಗೀತ ನೀಡುವುದರ ಜೊತೆಗೆ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಎಸ್.ಕೆ ರಾವ್ ಛಾಯಾಗ್ರಹಣ ಸಿನಿಮಾಗಿದೆ.
ಟಗರುಪಲ್ಯ ಗ್ರಾಮೀಣ ಸೊಗಡು ಹೊಂದಿರುವ ಸಿನಿಮಾವಾಗಿದೆ. ಇಲ್ಲಿ ಕೇವಲ ಪ್ರೀತಿ-ಪ್ರೇಮದ ಕಥೆಯಿಲ್ಲ. ಬದಲಾಗಿ ಸಂಬಂಧಗಳ ಮೌಲ್ಯವನ್ನು ಚತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಸಕ್ಕರೆನಟು ಮಂಟ್ಯ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಚಿತ್ರದ ಕಥೆ ಹೆಣೆಯಲಾಗಿದೆ..
ಕಥೆ: ಟಗರುಪಲ್ಯ ಒಂದು ಹರಕೆಯ ಕಥೆ. ಈ ಚಿತ್ರದ ಕಥೆ ಆರಂಭವಾಗುವುದು ಸೂರ್ಯ ಹುಟ್ಟೋಕು ಮುಂಚೆ ಹಾಗೂ ಮುಗಿಯುವುದು ಸಂಜೆ ಮಳೆ ಜೋರಾಗಿ ಹೊಯ್ಯುವ ಹೊತ್ತಿಗ. ಕುಟುಂಬವೊಂದು ಊರ ದೇವರಿಗೆ ಹರಕೆ ತೀರಿಸಲು ಹೋದಾಗ ಏನೆಲ್ಲಾ ನಡೆಯುತ್ತೆ ಅನ್ನೋದೆ ಸಿನಿಮಾ ಜೀವಾಳ. ಇದರಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ನಗು, ಪ್ರೇಮಿಗಳ ವೇದನೆ, ತಂದೆಯ ಚಿಂತನೆ, ತಲೆ ಒದರದ ಟಗರಿನ ರೋಧನೆ ಎಲ್ಲವೂ ಇದೆ.
ಬಿಡುಗಡೆ: ಟಗರುಪಲ್ಯ ಸಿನಿಮಾ ಅಕ್ಟೋಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.