ತರ್ಲೆ ನನ್ನ ಮಗ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಟೆನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಉಪೇಂದ್ರ ಅವರ ನಿರ್ದೇಶನ ಮತ್ತು ವಿ ಮನೋಹರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಚಿತ್ರದ ಕಥೆ ಒಬ್ಬ ಜಿಪುಣ ದಂಪತಿಗಳು ಮತ್ತು ಅವರ ವಿಲಾಸಿ ಮಗನ ಸುತ್ತ ಸುತ್ತುತ್ತದೆ. ವರದಕ್ಷಿಣೆಗಾಗಿ ಶ್ರೀಮಂತ ಸಂಬಂಧ ಹುಡುಕುವ ತಂದೆ ತಾಯಿ ಮತ್ತು ಸಂಗೀತ ಎಂಬ ಬಡಹುಡಗಿಯ ಪ್ರೀತಿ ಮಾಡುವ ಸಂತೋಷನ ಕಥೆಯನ್ನು ಉಪೇಂದ್ರ ಹಾಸ್ಯಭರಿತವಾಗಿ ಹೇಳಿದ್ದಾರೆ.