ದಿ ರೈಸ್ ಆಫ್ ಅಶೋಕ ಸಿನಿಮಾವನ್ನು ವಿನೋದ್ ವಿ ದೋಂಡಾಲೆ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನೀನಾಸಂ ಸತೀಶ್ ನಾಯಕನಾಗಿ ನಟಿಸಿದ್ದಾರೆ. ಕಾವ್ಯ ಶೆಟ್ಟಿ ಚಿತ್ರದ ನಾಯಕಿ. ಹಿಸ್ಟೋರಿಕಲ್ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಒಂದು ಜನಾಂಗದ ನಾಯಕನಾಗಿ ಆ ಜನಾಂಗದ ಒಳಿತಿಗಾಗಿ ಹೋರಾಡುವ ನಾಯಕನಾಗಿ ಸತೀಶ್ ನೀನಾಸಂ ಕಾಣಿಸಿಕೊಂಡಿದ್ದಾರೆ. ಇದೊಂದು ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, 80 ದಶಕದ ಕುರಿತ ಚಿತ್ರ. ಸಿನಿಮಾದಲ್ಲಿ ಸತೀಶ್ ನೀನಾಸಂ, 25, 35 ಮತ್ತು 75ರ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರವನ್ನು ನರಹರಿ ನಿರ್ಮಾಣ ಮಾಡುತ್ತಿದ್ದು, ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ಮತ್ತು ಲವಿತ್ ಛಾಯಾಗ್ರಹಣವಿದೆ. ದಯನಂದ್ ಟಿ.ಕೆ ಚಿಕಥೆ ಬರೆದಿದ್ದಾರೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ, ಸತೀಶ್ ನೀನಾಸಂ ಅವರೇ ತೆಲುಗು, ತಮಿಳು ಕಲಿತು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ.
ಟೈಟಲ್ ಬದಲಾವಣೆ: ಈ ಸಿನಿಮಾಗೆ ಮೊದಲು ಅಶೋಕ ಬ್ಲೇಡ್ ಅಂತ ಹೆಸರಿಡಲಾಗಿತ್ತು. ಆದರೆ, 2025ರ ಜನವರಿ 9ರಂದು ದಿ ರೈಸ್ ಆಫ್ ಅಶೋಕ ಅಂತ ಬದಲಾವಣೆ ಮಾಡಲಾಯಿತು.