X
ತ್ರಾಟಕ
Action | 31 Aug 2018 |
Kannada

ತ್ರಾಟಕ ಕಥೆ

ದೇವ್ (ರಾಹುಲ್ ಐನಾಪೂರ್) ಹಾಗೂ ರವಿ (ಅಜಿತ್ ಜಯರಾಜ್) ಎಂಬ ಇಬ್ಬರು ಪೋಲೀಸ್ ಆಫೀಸ್ ಗಳು ಇರುತ್ತಾರೆ. ಟ್ರೈನಿಂಗ್ ದಿನಗಳಿಂದ ಇಬ್ಬರು ಒಳ್ಳೆಯ ಗೆಳೆಯರಾಗಿರುತ್ತಾರೆ. ಈ ರೀತಿ ಇದ್ದಾಗ ದೇವ್ ಸಹೋದರ ನಿಖಿಲ್ ಕೊಲೆ ಆಗುತ್ತದೆ. ಆ ಕೊಲೆ ಯಾರು ಮಾಡಿದ್ದಾರೆ ಎಂದು ಪತ್ತೆ ಹಚ್ಚಲು ದೇವ್ ಹಾಗೂ ರವಿ ತನಿಖೆ ಶುರು ಮಾಡುತ್ತಾರೆ. ಹೀಗೆ ಸಿನಿಮಾ ಕಥೆ ಶುರು ಆಗುತ್ತದೆ.ಪ್ರಾರಂಭದಲ್ಲಿ ಆಗುವ ಒಂದು ಕೊಲೆಯ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಆದರೆ, ಆ ಕೊಲೆಯ ಬಳಿಕ ಇನ್ನೊಂದು ಕೊಲೆ, ಮತ್ತೊಂದು ಕೊಲೆ ಆಗುತ್ತದೆ. ತನಿಖೆ ನಡೆಸುತ್ತಿರುವ ದೇವ್ ತನ್ನ ಅರಿವಿಲ್ಲದೆ ಆ ಕೊಲೆ ಮಾಡುತ್ತಾನೆ. ದೇವ್ ಮಾನಸಿಕ ಸ್ಥಿತಿ ಸರಿ ಇರದಿರುವ ಕಾರಣ ಅವನೇ ಈ ಕೊಲೆ ಮಾಡಿದ್ದಾನೆ ಎಂದು ಪ್ರೇಕ್ಷಕರು ಸಹ ನಿರ್ಧರಿಸಿ ಬಿಡುತ್ತಾರೆ.ಸಿನಿಮಾದಲ್ಲಿ ನಡೆಯುವ ಈ ಕೊಲೆಗಳನ್ನು ಯಾರು ಮಾಡಿದರು ಎಂಬುದು ಪ್ರೇಕ್ಷಕರ ದೊಡ್ಡ ಪ್ರಶ್ನೆ ಆಗುತ್ತದೆ. ಈ ಕೊಲೆಯನ್ನು ದೇವ್ ಮಾಡಿದ್ನಾ ಅಥವಾ ಬೇರೆ ಯಾರಾದರೂ ಮಾಡಿದ್ರಾ ಎನ್ನುವುದು ಚಿತ್ರದ ಕಥೆ. ಮೊದಲು ದೇವ್ ಈ ಕೊಲೆ ಮಾಡಿರಬೇಕು ಎಂದು ಅನಿಸಿದರೂ ನಂತರ ಬೇರೆ, ಬೇರೆಯವರ ಬಗ್ಗೆ ಅನುಮಾನ ಮೂಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+