X
ತ್ರಾಟಕ

ತ್ರಾಟಕ

Action | 31 Aug 2018 |
Kannada

2.5 /5 Users

3 /5 Filmibeat

ತ್ರಾಟಕ ಕಥೆ

ದೇವ್ (ರಾಹುಲ್ ಐನಾಪೂರ್) ಹಾಗೂ ರವಿ (ಅಜಿತ್ ಜಯರಾಜ್) ಎಂಬ ಇಬ್ಬರು ಪೋಲೀಸ್ ಆಫೀಸ್ ಗಳು ಇರುತ್ತಾರೆ. ಟ್ರೈನಿಂಗ್ ದಿನಗಳಿಂದ ಇಬ್ಬರು ಒಳ್ಳೆಯ ಗೆಳೆಯರಾಗಿರುತ್ತಾರೆ. ಈ ರೀತಿ ಇದ್ದಾಗ ದೇವ್ ಸಹೋದರ ನಿಖಿಲ್ ಕೊಲೆ ಆಗುತ್ತದೆ. ಆ ಕೊಲೆ ಯಾರು ಮಾಡಿದ್ದಾರೆ ಎಂದು ಪತ್ತೆ ಹಚ್ಚಲು ದೇವ್ ಹಾಗೂ ರವಿ ತನಿಖೆ ಶುರು ಮಾಡುತ್ತಾರೆ. ಹೀಗೆ ಸಿನಿಮಾ ಕಥೆ ಶುರು ಆಗುತ್ತದೆ.ಪ್ರಾರಂಭದಲ್ಲಿ ಆಗುವ ಒಂದು ಕೊಲೆಯ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಆದರೆ, ಆ ಕೊಲೆಯ ಬಳಿಕ ಇನ್ನೊಂದು ಕೊಲೆ, ಮತ್ತೊಂದು ಕೊಲೆ ಆಗುತ್ತದೆ. ತನಿಖೆ ನಡೆಸುತ್ತಿರುವ ದೇವ್ ತನ್ನ ಅರಿವಿಲ್ಲದೆ ಆ ಕೊಲೆ ಮಾಡುತ್ತಾನೆ. ದೇವ್ ಮಾನಸಿಕ ಸ್ಥಿತಿ ಸರಿ ಇರದಿರುವ ಕಾರಣ ಅವನೇ ಈ ಕೊಲೆ ಮಾಡಿದ್ದಾನೆ ಎಂದು ಪ್ರೇಕ್ಷಕರು ಸಹ ನಿರ್ಧರಿಸಿ ಬಿಡುತ್ತಾರೆ.ಸಿನಿಮಾದಲ್ಲಿ ನಡೆಯುವ ಈ ಕೊಲೆಗಳನ್ನು ಯಾರು ಮಾಡಿದರು ಎಂಬುದು ಪ್ರೇಕ್ಷಕರ ದೊಡ್ಡ ಪ್ರಶ್ನೆ ಆಗುತ್ತದೆ. ಈ ಕೊಲೆಯನ್ನು ದೇವ್ ಮಾಡಿದ್ನಾ ಅಥವಾ ಬೇರೆ ಯಾರಾದರೂ ಮಾಡಿದ್ರಾ ಎನ್ನುವುದು ಚಿತ್ರದ ಕಥೆ. ಮೊದಲು ದೇವ್ ಈ ಕೊಲೆ ಮಾಡಿರಬೇಕು ಎಂದು ಅನಿಸಿದರೂ ನಂತರ ಬೇರೆ, ಬೇರೆಯವರ ಬಗ್ಗೆ ಅನುಮಾನ ಮೂಡುತ್ತದೆ.
Read More

ತ್ರಾಟಕ ಕಲಾವಿದರು ಮತ್ತು ಸಿಬ್ಬಂದಿ

ತ್ರಾಟಕ ಕ್ರೂ ಮಾಹಿತಿ

ನಿರ್ದೇಶಕ ಶಿವಗಣೇಶ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರುಣ್ ಸುರದಾ
ನಿರ್ಮಾಪಕ ರಾಹುಲ್ ಐನಾಪೂರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತ್ರಾಟಕ ವಿಮರ್ಶಕರ ವಿಮರ್ಶೆ

kannada.filmibeat.com
'ತ್ರಾಟಕ' ಒಂದು ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ. ಸಿನಿಮಾ ಶುರುವಿನಿಂದ ಮುಗಿಯುವವರೆಗೆ ನೋಡುವವರಿಗೆ ಭಯ ಮತ್ತು ಕುತೂಹಲ ಎರಡು ಅಂಶಗಳು ಇರುತ್ತದೆ. ಚಿತ್ರದ ಕಥೆಯಲ್ಲಿ ಇರುವ ಟ್ವಿಸ್ಟ್ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ. ಚಿತ್ರದಲ್ಲಿ ಪ್ರತಿ 15 ನಿಮಿಷಕ್ಕೆ ಬಂದರಂತೆ ಟ್ವಿಸ್ಟ್ ಸಿಗುತ್ತದೆ. ಒಂದು ಕ್ರೈಂ ಥ್ರಿಲ್ಲರ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿ ಇವೆ. ಲವ್ ಸ್ಟೋರಿ, ಮಾಸ್‌, ಆಕ್ಷನ್ ಬಿಟ್ಟು ಕೊಂಚ ಬೇರೆಯ ಫೀಲ್ ಈ ಸಿನಿಮಾ ನೀಡುತ್ತದೆ. ಸೋ, ಆರಾಮಾಗಿ ಯಾವುದೇ ಅಡ್ಡಿ ಇಲ್ಲದೆ ಈ ಸಿನಿಮಾ ನೋಡಬಹುದು.

ತ್ರಾಟಕ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

ತಾರೆಗಳ ಹುಟ್ಟುಹಬ್ಬ

×
2.5 /5 Your Rating

ತ್ರಾಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+