ಓಂ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕ್ರೇಜಿ ಸ್ಟಾರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯರಾಗಿ ಶಾನ್ವಿ ಶ್ರೀವಾತ್ಸವ್, ನಿಮಿಕಾ ರತ್ನಾಕರ್ ಮತ್ತು ಆದಿತಿ ಆರ್ಯ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ಬಂಡವಾಳ ಹೂಡುತ್ತಿದ್ದಾರೆ.
ಈ ಚಿತ್ರ ತೆಲುಗಿನ ರವಿತೇಜ ಅಭಿನಯದ ಸೂಪರ್ ಹಿಟ್ ಬಲುಪು ಚಿತ್ರದ ರಿಮೇಕ್ ಆಗಿದೆ. ಅರ್ಜುನ ಜನ್ಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮೊದಲ ಬಾರಿಗೆ ಉಪ್ಪಿ ಮತ್ತು ರವಿಚಂದ್ರನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲು ಈ ಚಿತ್ರಕ್ಕೆ ರವಿಚಂದ್ರ ಎಂದು ಹೆಸರಿಡಲಾಗಿತ್ತು.