ಸುನೀಲ್ ಕುಮಾರ ದೇಸಾಯಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಉದ್ಘರ್ಷ' ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್,ಸಾಯಿ ಧನ್ಸಿಕಾ,ತಾನ್ಯಾ ಹೋಪ್ ಮತ್ತು ಕಬೀರ್ ದುಹಾನ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಒಂದು ಪಾರ್ಟಿಯಲ್ಲಿ ಆದಿತ್ಯ (ಅನೂಪ್ ಠಾಕೂರ್) ತನ್ನ ಪ್ರೇಯಸಿ ರಶ್ಮಿ (ಸಾಯಿ ಧನ್ಸಿಕಾ)ಗೆ ತನ್ನ ಪ್ರೇಮ ನಿವೇದನೆ ಮಾಡಲು ಆಲೋಚನೆ ಮಾಡಿರುತ್ತಾನೆ. ಆದರೆ ಹಠಾತ್ ಆಗಿ ನೆಡೆಯುವ ಘಟನೆಯೊಂದರಿಂದ ಪಾರ್ಟಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಎನೇಂದು ನೋಡುವಷ್ಟರಲ್ಲಿ ಮೆನನ್(ಕಿಶೋರ್) ಎಂಬುವವರ ಕೊಲೆಯೊಂದು ನೆಡೆದಿರುತ್ತದೆ. ಅದೇ ಸಮಯದಲ್ಲಿ ರಶ್ಮಿಯ ಕಿಡ್ನಾಪ್ ಅಗುತ್ತದೆ.
ತನ್ನ ಗೆಳತಿ ಕರಿಷ್ಮಾ (ತಾನ್ಯಾ ಹೋಪ್) ಜೊತೆ ಸೇರಿ ರಶ್ಮಿ ಜಾಡು ಹಿಡಿದು ಮಡಿಕೇರಿವರೆಗೂ ಆದಿತ್ಯ ಹೋಗುತ್ತಾನೆ.ಅಲ್ಲಿ ಖಳನಾಯಕರ ಕೈಮೇಲಾಗಿ ಆದಿತ್ಯ ನಿರಾಸೆಯಾಗುತ್ತಾನೆ. ಇದೇ ಸಮಯದಲ್ಲಿ ಮೆನನ್ ಕೊಲೆಯ ಸಂಶಯ ಆದಿತ್ಯನ ಸುತ್ತ ಸುತ್ತುತ್ತದೆ. ಹಾಗಾದರೆ ನಿಜವಾಗಿಯೂ ಮೆನನ್ ಕೊಲೆ ಮಾಡಿದವರು ಯಾರು?ರಶ್ಮಿಯನ್ನು ಕಿಡ್ನಾಪ್ ಮಾಡಿದ್ದು ಯಾರು? ಆದಿತ್ಯ ರಶ್ಮಿಯನ್ನು ಕಾಪಾಡುತ್ತಾನಾ? ಎಂಬುದೇ ಚಿತ್ರದ ಜೀವಾಳವಾಗಿದೆ.