ಶಿವರಾಜಕುಮಾರ್ 125 ನೇ ಚಿತ್ರ `ವೇದ'ವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಶಿವಣ್ಣನಿಗೆ ನಾಲ್ಕನೇ ಬಾರಿ ಆ್ಯಕ್ಸನ್ ಕಟ್ ಹೇಳಿದ್ದಾರೆ. ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಶಿವರಾಜಕುಮಾರ್ ರವರು ತಮ್ಮ ಹೋಮ್ ಬ್ಯಾನರ್ ಗೀತಾ ಸ್ಟುಡಿಯೋಸ್ ಅಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ಅರುಣ್ ಸಾಗರ್ ಪುತ್ರಿ ಆದಿತಿ ಶಿವಣ್ಣ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಕುರಿ ಪ್ರತಾಪ್, ಜಗ್ಗಪ್ಪ ಮತ್ತು ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಿಲೀಸ್: ಶಿವರಾಜಕುಮಾರ್ 125ನೇ ಸಿನಿಮಾವಾದ ವೇದ 2022ರ ಡಿಸೆಂಬರ್ 32ರಂದು ಬಿಡುಗಡೆಯಾಗಿದೆ.
ಕಥೆ: ಸಿನಿಮಾದ ಕತೆ ಸರಳ. ಮಗಳ ಮೇಲೆ ನಡೆದ ದೌರ್ಜನ್ಯಕ್ಕೆ ಅಪ್ಪ ಸೇಡು ತೀರಿಸಿಕೊಳ್ಳುವ ಕತೆ 'ವೇದ'ನದ್ದು. ಆದರೆ ಈ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಗಳನ್ನು ತೊಡಗಿಸಿಕೊಳ್ಳುತ್ತಾನೆ ವೇದ. 'ಅನುಮತಿ ಇಲ್ಲದೆ ಮೈಮುಟ್ಟಿದವನ ಮೈ-ಕೈ ಮುರಿಯಲು ಮಹಿಳೆಯರಿಗೆ ಯಾರ ಅನುಮತಿಯೂ ಬೇಕಿಲ್ಲ' ಎಂಬುದು ವೇದನ ನಂಬಿಕೆ, ಅದೇ ನಂಬಿಕೆಯನ್ನು ಮಗಳಲ್ಲಿಯೂ ಬಿತ್ತಿದ್ದಾನೆ ವೇದ.