ಯುದ್ಧಕಾಂಡ 2 ಸಿನಿಮಾವನ್ನು ಯುವ ನಿರ್ದೇಶಕ ಪವನ್ ಭಟ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಜಯ್ ರಾವ್ ನಾಯಕನಾಗಿ ಹಾಗೂ ಅರ್ಚನಾ ಜೋಯಿಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರಕಾಶ್ ಬೆಳವಾಡಿ, ಟಿ.ಎಸ್ ನಾಗಭರಣ ಮುಂತಾದವರು ತಾರಾಗಣದಲ್ಲಿದ್ದಾರೆ ಚಿತ್ರಕ್ಕೆ ಹೇಮಂತ್ ಜೋಯಿಸ್, ಕೆಬಿ ಪ್ರವೀಣ್ ಸಂಗೀತ ಹಾಗೂ ಎಸ್‌ಕೆ ಕಾರ್ತಿಕ್ ಶರ್ಮಾ ಛಾಯಾಗ್ರಹಣವಿದೆ. ಸ್ವತಃ ಅಜಯ್ ಅವರೇ ಈ ಸಿನಿಮಾ ನಿರ್ಮಿಸಿದ್ದಾರೆ.
ಬಿಡುಗಡೆ: ಯುದ್ಧಕಾಂಡ 2 ಸಿನಿಮಾ 2025ರ ಏಪ್ರಿಲ್ 18ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.