ಯುವ ಸಿನಿಮಾವನ್ನು
ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದೊಡ್ಮನೆ ಕುಡಿ
ಯುವ ರಾಜ್‌ಕುಮಾರ್ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಾಂತಾರ ಚೆಲುವೆ
ಸಪ್ತಮಿ ಗೌಡ ಈ ಸಿನಿಮಾದ ನಾಯಕಿ. ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಬಿ ಅಜನೀಶ್ ಲೋಕನಾಥ್ ಸಂಗೀತ ಹಾಗೂ ಶ್ರೀಶಾ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಯುವ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ
ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದಾರೆ. ಆನಂದ್ ಆಡಿಯೋ ಸಂಸ್ಥೆ ಯುವ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದೆ..
ಕಥೆ: ಮಂಗಳೂರಿನ ಕಾಲೇಜೊಂದರಲ್ಲಿ ಲೋಕಲ್ ಹುಡುಗರು ತಾವೇ ಮೇಲು ಎಂಬ ಭಾವನೆಯಲ್ಲಿ ಮೆರೆಯುತ್ತಿರುತ್ತಾರೆ. ಉಳಿದ ಹಾಸ್ಟೆಲ್ ಹುಡುಗರಿಗೆ ತಾವು ಹೊರಗಿನವರು ಎಂಬ ಅಳುಕಿರುತ್ತದೆ. ಈ ಕಾರಣಕ್ಕರ ಲೋಕಲ್ ಸಹವಾಸವೇ ಬೇಡ ಎಂಬಂತಿರುತ್ತಾರೆ. ಆದರೆ, ಯುವ ಹಾಗಲ್ಲ. ಆತನ ಬೈಕ್ ಟಚ್ ಮಾಡಿದ ಲೋಕಲ್ ಹುಡುಗರ ಕೈ-ಕಾಲು ಮುರಿಯುತ್ತಾನೆ. ಇದು ನಂತರ ಗ್ಯಾಂಗ್ ವಾರ್ ಆಗಿ ಬದಲಾಗುತ್ತದೆ. ಇದರ ನಡುವೆ ಮೊದಲ ಪ್ರೇಮದ ಅನುರಾಗ ಇದೆ. ಹುಸಿ ಮುನಿಸು ಹಾಗೂ ಕೋಪವೂ ಇದೆ. ಸಿನಿಮಾದ ಮೊದಲಾರ್ಧ ಬಡೆದಾಟದಲ್ಲಿಯೇ ಮುಗಿದು ಹೋಗುತ್ತೆ. ಆದರೆ, ಚಿತ್ರದ 'ಮಧ್ಯಂತರ'ದ ಸಮಯದಲ್ಲಿ ಭಾವನಾತ್ಮಕವಾದ ಮೆರವಣಿಗೆಗೆ ಸಿದ್ಧವಾಗಿ ಕುಳಿತುಕೊಳ್ಳುವಂತೆ ಸೂಚನೆಯನ್ನ ಕೊಡ್ತಾರೆ. ಮೊದಲ ಭಾಗದಲ್ಲಿ ಮಾತು ಮಾತಿಗೂ ಸಿಡುಕುವ ಯುವ ನಂತರ ಏಕೆ ಬದಲಾಗುತ್ತಾನೆ? ಶಿಕ್ಷಣ ಮುಗಿಸಿ ಮನೆಗೆ ಬರುವ ಅವನಿಗೆ ಕಾದಿರುವ ಶಾಕ್ ಏನು? ದ್ವಿತಿಯಾರ್ಧದಲ್ಲಿ ಆತನ ಬದುಕು ಹೇಗೆ ಬದಲಾಗುತ್ತದೆ ಎಂಬುದೇ ಸಿನಿಮಾ ಕಥೆ.
ಬಿಡುಗಡೆ: ಯುವ ಸಿನಿಮಾ 2024ರ ಮಾರ್ಚ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.