Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಉಪೇಂದ್ರ ಗಾಡ್ ಫಾದರ್ ಚಿತ್ರಕ್ಕೆ ರೆಹಮಾನ್ ಸಂಗೀತ
ಇದೇ ಮೊದಲ ಬಾರಿಗೆ ಕನ್ನಡಕ್ಕೆ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅಡಿಯಿಡುತ್ತಿದ್ದಾರೆ. ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ 'ಗಾಡ್ ಫಾದರ್' ಚಿತ್ರಕ್ಕೆ ರೆಹಮಾನ್ ಸ್ವರ ಸಂಯೋಜನೆ ಮಾಡಲಿದ್ದಾರೆ. ನಿರ್ದೇಶಕನಾಗಿ ಬದಲಾದಛಾಯಾಗ್ರಾಹಕ ಪಿ ಸಿ ಶ್ರೀರಾಮ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ತಮಿಳಿನ ಯಶಸ್ವಿ ಚಿತ್ರ 'ವರಲಾರು' ಚಿತ್ರದ ರೀಮೇಕ್ 'ಗಾಡ್ ಫಾದರ್'. ಮೂಲ ಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶಿಸಿದ್ದರು. ಮೂಲ ಚಿತ್ರಕ್ಕೂ ರೆಹಮಾನ್ ಅವರೇ ಸಂಗೀತ ಸಂಯೋಜಿಸಿದ್ದರು. ಈಗ ಕನ್ನಡದ ಅವತರಣಿಕೆಗೂ ರೆಹಮಾನ್ ಅವರೇ ಸಂಗೀತ ನಿರ್ದೇಶಿಸಲಿದ್ದಾರೆ. ಈ ವಿಷಯವನ್ನು ಸ್ವತಃ ರೆಹಮಾನ್ ಅವರೇ ಶ್ರೀರಾಮ್ ಅವರಿಗೆ ಇ-ಮೇಲ್ ಮೂಲಕ ಖಚಿತಪಡಿಸಿದ್ದಾರೆ.
ವಿಶೇಷ ಎಂದರೆ ಇಲ್ಲಿ ಮೂಲ ಚಿತ್ರದ ಟ್ಯೂನ್ಸ್‌ಗೆ ಬದಲಾಗಿ ಹೊಸ ಟ್ಯೂನ್ಸ್ ಸಂಯೋಜಿಸಲಿದ್ದಾರೆ.ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಎಲ್ಲವನ್ನೂ ಹೊಸದಾಗಿ ಸಂಯೋಜಿಸಲಿದ್ದಾರೆ. ಮೂಲ ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿದ್ದವು. 'ವರಲಾರು' ಚಿತ್ರದ ಛಾಯಾಗ್ರಾಹಕರಾಗಿ ಪಿ ಸಿ ಶ್ರೀರಾಮ್ ಕೆಲಸ ಮಾಡಿದ್ದರು.
ಗಾಯಕ/ಗಾಯಕಿಯರನ್ನು ಆಯ್ಕೆ ಮಾಡುವ ಅವಕಾಶವನ್ನು ರೆಹಮಾನ್ ಅವರಿಗೆ ಬಿಡಲಾಗಿದೆ. ಆಡಿಯೋ ರೈಟ್ಸ್ ಗಾಗಿ ಈಗಾಗಲೆ ಆನಂದ್ ಆಡಿಯೋ ಒಪ್ಪಂದ ಪತ್ರಗಳಿಗೆ ಸಹಿಹಾಕಿದೆ ಎಂದು ಚಿತ್ರದ ನಿರ್ಮಾಪಕ ಕೆ ಮಂಜು ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಸೌಂದರ್ಯ ಜಯಮಾಲಾ ಆಯ್ಕೆ ಖಚಿತವಾಗಿದೆ. ಸಿಮ್ರಾನ್ ಹಾಗೂ ಭೂಮಿಕಾ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.