»   »  ಗಂಡು ಭೂಮಿಯ ವೀರ ನಾರಿ ಓಬವ್ವಳ ಹಾಡು

ಗಂಡು ಭೂಮಿಯ ವೀರ ನಾರಿ ಓಬವ್ವಳ ಹಾಡು

Subscribe to Filmibeat Kannada
Jayanthi
ಮಾಂತ್ರಿಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರ 'ನಾಗರಹಾವು' (1972)ಚಿತ್ರದ ''ಕನ್ನಡ ನಾಡಿನ ವೀರರಮಣಿಯ...'' ಹಾಡು ಕೇಳಿದರೆ ಎಂಥವರಿಗೂ ಮೈ ಜುಂ ಎನ್ನ್ನುತ್ತದೆ. ಜಯಂತಿ ಅವರ ಅಮೋಘ ಅಭಿನಯ ನಿಜವಾಗಿಯೂ ಓಬವ್ವಳನ್ನೇ ಕಣ್ಣಮುಂದೆ ನಿಲ್ಲಿಸುತ್ತದೆ. ಹಿನ್ನಲೆ ಗಾಯಕ ಪಿ.ಬಿ.ಶ್ರೀನಿವಾಸ್ ಕಂಠ ಮಾಧುರ್ಯ, ವಿಜಯ ಭಾಸ್ಕರ್ ಸಂಗೀತ, ಚಿ.ಉದಯಶಂಕರ್ ಸಾಹಿತ್ಯ ಮಂತ್ರ ಮುಗ್ಧಗೊಳಿಸುತ್ತದೆ. ಕನ್ನಡ ನಾಡಿನ ಇತಿಹಾಸದಲ್ಲಿ ಒನಕೆ ಓಬವ್ವಳ ಸಾಹಸಗಾಥೆ ನಿಜಕ್ಕೂ ರೋಮಾಂಚನ.


ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು

ವೀರಮದಕರಿ ಆಳುತಲಿರಲು ಹೈದರಾಲಿಯು ಯುದ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಡಚಾರರು ಅಲೆದು ಬಂದರು ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದ ಕಂಡಳು

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು

ಅಮರಳಾದಳು ಓಬವ್ವ....

(ದಟ್ಸ್ ಕನ್ನಡ ಚಿತ್ರವಾರ್ತೆ)

ದುರ್ಗದ ಸಮ್ಮೇಳನ
ಚಿತ್ರದುರ್ಗದ ದಿಗ್ಗಜರ ನಾಮ ಸ್ಮರಣೆ
ವಚನ ಸಾಹಿತ್ಯದ ವಕ್ತಾರ ಎಲ್ ಬಸವರಾಜು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada