»   »  ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?

ದುಬಯ್ ಬಾಬು ಚಿತ್ರದ ಹಾಡುಗಳು ಹೇಗಿವೆ?

Posted By: *ನಿಸ್ಮಿತಾ
Subscribe to Filmibeat Kannada

ಚಿತ್ರದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟಿಲ್ಲ, ಚಿತ್ರದ 2 ಹಾಡುಗಳಲ್ಲಿ ಹಳೆಯ ಹಿಂದಿ ಚಿತ್ರಗಳ ಧ್ವನಿ ರಿಂಗಣಿಸಿದೆ. ಇದು ದುಬಯ್ ಬಾಬು ಧ್ವನಿಸುರುಳಿಯ ಒಂದು ಸಾಲಿನ ವಿಮರ್ಶೆ! ಸಂಗೀತ ನಿರ್ದೇಶಕ ವಿ ಶ್ರೀಧರ್ ಈ ಚಿತ್ರಕ್ಕೆ 6 ಹಾಡುಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ಮೊದಲಬಾರಿ ಆಂಧ್ರ ಮೂಲದ ಆದಿತ್ಯಾ ಆಡಿಯೋ ಕಂಪನಿ ದುಬಯ್ ಬಾಬು ಕ್ಯಾಸೆಟ್ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದೆ. ಬುದ್ಧಿವಂತ ಚಿತ್ರದಹಾಗೆ ಎಲ್ಲಾ ಹಾಡುಗಳ ಮುಂಚೆ ಉಪೇಂದ್ರ ಅವರ ಸಂಭಾಷಣೆ ಧ್ವನಿಸುರುಳಿಯಲ್ಲಿ ಕೇಳಬಹುದು.

ಬೆಂದದಕಾಳೂರ ಗೌಡ ಎನ್ನುವ ಹಾಡನ್ನು ಉಪೇಂದ್ರ ಅವರೇ ಬರೆದು ಹಾಡಿದ್ದಾರೆ. ಈ ಹಾಡು ಅವರ ಅಭಿಮಾನಿಗಳಿಗೆ ಹೇಳಿಮಾಡಿಸಿದಂತೆ. 'ಪೀ ಪೀ ಪೀ ಢುಮ್ ಢುಮ್ ...' ಅನ್ನುವ ಹಾಡಿಗೆ ಉಪೇಂದ್ರ ಅವರ ಸಾಹಿತ್ಯವಿದೆ, "ಹಬ್ದುಲ್ಲಾ" ಎನ್ನುವ ಹಾಡಿಗೆ ಕವಿರಾಜ್ ಅವರ ಸಾಹಿತ್ಯವಿದೆ ಮತ್ತು ಅವರು ಈ ಹಾಡಿನಲ್ಲಿ ಸಾಹಿತ್ಯ ಅಂದರೆ ಏನು ಎಂಬುದನ್ನು ಮರೆತ ಹಾಗಿದೆ.

"ಬಾಚಿಕೋ ಬಾಚಿಕೋ" ಎನ್ನುವ ಹಾಡು ಇಂಪಾಗಿದೆ. ಒನ್ಸ್ ಅಪಾನ್ ಎ ಟೈಮ್... ಅನ್ನುವ ಹಾಡನ್ನು ಸ್ವತಃ ಶ್ರೀಧರ್ ಅವರೇ ಬರೆದು ಹಾಡಿ ತಮ್ಮಲ್ಲಿನ ಹಾಡುಗಾರನನ್ನು ಹೊರಗೆ ಹಾಕಿದ್ದಾರೆ. ಹರಿಹರನ್ ಮತ್ತು ಕುಮಾರ್ ಸಾನು ತಲಾ ಒಂದೊಂದು ಹಾಡನ್ನು ಹಾಡಿದ್ದಾರೆ. ಅವರ ಕನ್ನಡ ಉಚ್ಚಾರಣೆ ದೇವರಿಗೇ ಪ್ರೀತಿ. ಉದಾಹರನೆಗೆ ಅಪ್ಪಿಕೋ ಅನ್ನುವಲ್ಲಿ ಹಪ್ಪಿಕೋ, ಗೌಡ ಅನ್ನುವಲ್ಲಿ ಗೋಡಾ, ಕೂಡಿಕೋ ಅನ್ನುವಲ್ಲಿ ಕೋಡಿಕಾ ಇತ್ಯಾದಿ.. ಇತ್ಯಾದಿ ಎಂಬ ಅಪಸ್ವರಗಳನ್ನು ಕಿವಿಗೆ ಹಾಕಿಕೊಳ್ಳದಿದ್ದರೆ ದುಬಯ್ ಬಾಬು ಹಾಡುಗಳನ್ನು ಒಮ್ಮೆ ಕೇಳಬಹುದು!

ರಾಜ್, ದಿ ಶೋ ಮ್ಯಾನ್ ಧ್ವನಿಸುರಳಿ ವಿಮರ್ಶೆ
ಹದಿನೇಳರ ಗೆಟಪ್ಪಿನಲ್ಲಿ ಸೂಪರ್ ಸ್ಟಾರ್ ಉಪೇಂದ್ರ
ಕರ್ನಾಟಕಕ್ಕೆ ಕಾಲಿಟ್ಟ ಆಂಧ್ರ ಆಡಿಯೋ ಕಂಪನಿ
ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada