»   »  ನಿರ್ದೇಶಕ ತಾಯಿ ಇದ್ದಂತೆ: ಗಿರೀಶ್ ಕಾಸರವಳ್ಳಿ

ನಿರ್ದೇಶಕ ತಾಯಿ ಇದ್ದಂತೆ: ಗಿರೀಶ್ ಕಾಸರವಳ್ಳಿ

Subscribe to Filmibeat Kannada
Girish Kasaravalli
ಚಿತ್ರ ನಿರ್ದೇಶಕ ತಾಯಿ ಇದ್ದ್ದಂತೆ ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು. ಬುಧವಾರ ಅವರು 'ಕಲಾಕಾರ್' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತಾಡುತ್ತಿದ್ದರು.

ಕಲಾಕಾರ್ ನಿಗೆ ಕಥೆ, ಚಿತ್ರಕಥೆ ಬರೆದಿರುವ ಹರೀಶ್ ರಾಜ್ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗಿರೀಶ್ ಕಾಸರವಳ್ಳಿ ಅವರ 'ತಾಯಿ ಸಾಹೇಬ' ಮತ್ತು 'ದ್ವೀಪ' ಚಿತ್ರಗಳಲ್ಲಿ ಕಲಾಕಾರ್ ಅಭಿನಯಿಸಿದ್ದರು. ನಿರ್ದೇಶಕನಿಗೆ ವಿಭಿನ್ನವಾಗಿ ಆಲೋಚಿಸುವ ಗುಣ ಇರಬೇಕು. ಈ ಜಾಣ್ಮೆ ಹರೀಶ್ ರಾಜ್ ಅವರಲ್ಲಿದೆ ಎಂದು ಗಿರೀಶ್ ಕಾರ್ನಾಡ್ ಈ ಸಂದರ್ಭದಲ್ಲಿ ತಿಳಿಸಿದರು.

ಹರೀಶ್ ರಾಜ್ ಮಾತನಾಡುತ್ತಾ, ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನವನ್ನು ತೀರಾ ಹತ್ತಿರದಿಂದ ನೋಡಿದ್ದೇನೆ. ಕಲಾಕಾರ್ ಚಿತ್ರ ನಿರ್ದೇಶಿಸುವುದಕ್ಕೆ ಅದು ಬಹಳಷ್ಟು ಸಹಕಾರಿಯಾಯಿತು. ತಮ್ಮ ಚೊಚ್ಚಲ ನಿರ್ದೇಶನದ ಕಲಾಕಾರ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕಾಸವಳ್ಳಿ ಆಗಮಿಸಿದ್ದಕ್ಕೆ ಹರೀಶ್ ರಾಜ್ ಕೃತಜ್ಞತೆಗಳನ್ನು ತಿಳಿಸಿದರು. ಚಿತ್ರದಲ್ಲಿ ನಟಿಸುತ್ತಾ ನಿಗದಿತ ಬಜೆಟ್ ಮತ್ತು ಕಾಲಾವಧಿಯಲ್ಲಿ ಹರೀಶ್ ರಾಜ್ ಚಿತ್ರ ಮುಗಿಸಿರುವುದು ಮೆಚ್ಚುಗೆಗೆ ಪಾತ್ರವಾಯಿತು.

'ಚಿಕ್ಕ ಮಗಳೂರ ಚಿಕ್ಕ ಮಲ್ಲಿಗೆ ರಾಧಿಕಾ ಗಾಂಧಿ ಚಿತ್ರದ ನಾಯಕಿಯಾಗಿದ್ದು, ಚೆಲುವೆ ಸುಮನ್ ರಂಗನಾಥ್ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುಧಾ ನರಸಿಂಹರಾಜು, ಅವಿನಾಶ್(ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ), ರಾಜರಾವ್, ವಿಶ್ವ ಮುಂತಾದವರು ಚಿತ್ರದ ಉಳಿದ ತಾರಾಬಳಗದಲಿದ್ದಾರೆ. ಗಿರಿಧರ್ ದಿವಾನ್ ಸಂಗೀತ, ಎಚ್.ಎಂ.ರಾಮಚಂದ್ರ ಛಾಯಾಗ್ರಹಣ, ಶ್ರೀ(ಕ್ರೇಜಿ ಮೈಂಡ್ಸ್) ಸಂಕಲನ ಈ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹರೀಶ್ ರಾಜ್ ಕಲಾಕಾರ್ ಚಿತ್ರಕ್ಕೆ ಕ್ಲೀನ್ ಸೆನ್ಸಾರ್
ಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್
ದರ್ಶನ್ ರಿಂದ ಹೊರಾಂಗಣ ಚಿತ್ರೀಕರಣ ಘಟಕ
ಕನ್ನಡ ಚಿತ್ರೋದ್ಯಮದ ತ್ರೈಮಾಸಿಕ ಫಲಿತಾಂಶ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada