»   » ಗಾಯಕಿ ಪಲ್ಲವಿ ಅವರ ವಿಶೇಷ 'ಸ್ವರ ಸ್ಮರಣೆ'

ಗಾಯಕಿ ಪಲ್ಲವಿ ಅವರ ವಿಶೇಷ 'ಸ್ವರ ಸ್ಮರಣೆ'

Subscribe to Filmibeat Kannada
Singer MD Pallavi
ಸುಗಮ ಸಂಗೀತ ಲೋಕವನ್ನು ಅನಾವರಣಗೊಳಿಸುವ ವಿಶೇಷ ಕಾರ್ಯಕ್ರಮ 'ಸ್ವರ ಸ್ಮರಣೆ'. ಈ ಕಾರ್ಯಕ್ರಮಕ್ಕೆ ಗಾಯಕಿ ಎಂ.ಡಿ. ಪಲ್ಲವಿ ಸಾರಥ್ಯ ವಹಿಸಲಿದ್ದಾರೆ. ಜನವರಿ 28ರಂದು ಬೆಂಗಳೂರು ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಪಿ ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರಾಜು ಅನಂತಸ್ವಾಮಿ, ಜಿ.ವಿ.ಅತ್ರಿ, ಪದ್ಮಚರಣ್, ಎಚ್.ಕೆ.ನಾರಾಯನ್ ಹಾಗೂ ವಸಂತ್ ಕನಕಾಪುರ್ ಅವರು ಸಂಯೋಜನೆ ಮಾಡಿದ ಗೀತೆಗಳನ್ನು ಪಲ್ಲವಿ ಅವರು ಪ್ರಸ್ತುತ ಪಡಿಸಲಿದ್ದಾರೆ. ಆಯಾ ಗೀತೆಗಳಿಗೆ ಯಾವ ವಾದ್ಯಗಳನ್ನು ಬಳಸಿ ಸ್ವರ ಸಂಯೋಜನೆ ಮಾಡಲಾಗಿದೆಯೊ ಅದೇ ವಾದ್ಯಗಳನ್ನು ಪಲ್ಲವಿ ಅವರು ಬಳಸಿಕೊಳ್ಳುತ್ತಿರುವುದು ಕಾರ್ಯಕ್ರಮದ ವಿಶೇಷ.

ಸಿ.ಅಶ್ವಥ್ ಅವರ 'ದೇವ ವೀಣೆ' ಹಾಗೂ ಶಂಕರಾಚಾರ್ಯ ವಿರಚಿತ ಪ್ರವೀಣ್ ರಾವ್ ಸಂಗೀತ ನೀಡಿರುವ ಸಂಸ್ಕೃತ ಗೀತೆಗಳ 'ಕೈಲಾಸ್' ಧ್ವನಿಸುರುಳಿಗಳು ಬಿಡುಗಡೆಯಾಗಲಿವೆ.ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಅಂತರ್ಜಾಲ ತಾಣ ಅಥವಾ ಮೊಬೈಲ್ ಸಂಖ್ಯೆ 98444 73044, 90360 09704 ಸಂಪರ್ಕಿಸಬಹುದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada