»   »  ಮಧುರ ಯಾನ ಮಂಜುಳ ಗಾನ

ಮಧುರ ಯಾನ ಮಂಜುಳ ಗಾನ

Subscribe to Filmibeat Kannada

ಜನಪ್ರಿಯ ಹಿನ್ನೆಲೆ ಗಾಯಕಿ ಮಂಜುಳ ಗುರುರಾಜ್  ಅವರು ತಮ್ಮ ವೃತ್ತಿ ಜೀವನದಲ್ಲಿ 25 ವಸಂತಗಳನ್ನು ಪೂರೈಸಿದ್ದಾರೆ. ಈ ಹೆಗ್ಗಳಿಕೆಗಾಗಿ ರಂಜನಿ ಕಲಾಕೇಂದ್ರವು ಅ.30ರಂದು 'ಮಧುರ ಯಾನ ಮಂಜುಳ ಗಾನ' ಶೀರ್ಷಿಕೆಯಡಿ ಸುಮಧುರ ಸಂಗೀತ ಕಾರ್ಯಕ್ರಮವನ್ನು ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ ಏರ್ಪಡಿಸಿದೆ.

ಕಾರ್ಯಕ್ರಮದಲ್ಲಿ ಮಂಜುಳ ಗುರುರಾಜ್  ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಭವ್ಯ ಸಂಗೀತ ರಾತ್ರಿ ಕಾರ್ಯಕ್ರಮದಲ್ಲಿ ಮಂಜುಳ ಗುರುರಾಜ್ ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಹ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 30 ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 99806 33114 ಸಂಪರ್ಕಿಸಬಹುದು.

ಕಾರ್ಯಕ್ರಮಕ್ಕೆ ಎಸ್.ಜಾನಕಿ, ಇಳಯರಾಜ, ಡಿ.ಜೇಸುದಾಸ್, ಎಂ.ಡಿ.ಪಲ್ಲವಿ, ಅರ್ಚನಾ ಉಡುಪ, ರಾಜೇಶ್ ಕೃಷ್ಣ, ನಂದಿತಾ, ಸಂಗೀತಾ ಕಟ್ಟಿ, ಹಂಸಲೇಖ, ವಿಜಯ್ ಆನಂದ್, ನರಸಿಂಹ ನಾಯಕ್, ಶಿವಮೊಗ್ಗ ಸುಬ್ಬಣ್ಣ, ರಮೇಶ್ಚಂದ್ರ, ಮನೋಹರ್, ವಿಷ್ಣುವರ್ಧನ್, ಅಂಬರೀಷ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಕುಟುಂಬದವರು, ಜಯಮಾಲಾ, ದ್ವಾರಕೀಶ್, ಅಪರ್ಣ, ಶ್ರುತಿ, ಸುರೇಖ ಮತ್ತು ಅಜಯ್ ವಾರಿಯರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada