»   » ಟ್ವಿಟ್ಟರ್ ಹಕ್ಕಿಯ ಹಿಂದೆ ಹಾಡು ಹಕ್ಕಿ ಲತಾ ಮಂಗೇಷ್ಕರ್

ಟ್ವಿಟ್ಟರ್ ಹಕ್ಕಿಯ ಹಿಂದೆ ಹಾಡು ಹಕ್ಕಿ ಲತಾ ಮಂಗೇಷ್ಕರ್

Posted By:
Subscribe to Filmibeat Kannada

ಹಾಡುಹಕ್ಕಿ ಲತಾ ಮಂಗೇಷ್ಕರ್ ಟ್ವಿಟ್ಟರ್ ಹಕ್ಕಿಯ ಹಿಂದೆ ಬಿದ್ದಿದ್ದಾರೆ. ಈ ಎರಡು ಹಕ್ಕಿಗಳ ಬೆನ್ನುಬಿದ್ದಾರೆ ಅಪಾರ ಅಭಿಮಾನಿಗಳು. ಈ ಹಿಂದೆ ಆಶಾ ಭೋಸ್ಲೆ ಟ್ವಿಟ್ಟರ್ ಖಾತೆ ತೆರೆದಿದ್ದರು. ಲತಾ ಮಂಗೇಷ್ಕರ್ ಹೆಸರಿನಲ್ಲಿ ನಕಲಿ ಅಕೌಂಟನ್ನ್ನು ಸೃಷ್ಟಿಸುವ ಮುನ್ನ ಸ್ವತಃ ಅವರೇ ಅಸಲಿ ಅಕೌಂಟನ್ನು ತೆರೆದಿದ್ದಾರೆ.

ಆಶಾ ಭೋಸ್ಲೆ ಅಕ್ಕನ ಟ್ವಿಟ್ಟರ್ ಅಕೌಂಟ್ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದಾರೆ. "ಆಶಾ ,ಟ್ವಿಟ್ಟರ್ ಐಡಿ ಅಸಲಿ ತಾನೆ?" ಎಂದು ಟ್ವೀಟ್ ಮಾಡಿದ್ದಾರೆ. ಇದುವರೆಗೂ ಲತಾ ಮಂಗೇಷ್ಕರ್ ಬಾಲಿವುಡ್ ಹಲವು ಮಂದಿಗೆ ಟ್ವೀಟ್ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ.

ಅಮಿತಾಬ್ ಬಚ್ಚನ್, ಸೋನು ನಿಗಂ ಮತ್ತು ಶ್ರೇಯಾ ಘೋಶಾಲ್ ಇವರಿಗೆಲ್ಲಾ ಹಾಡು ಹಕ್ಕಿ ಟ್ವೀಟ್ ಹಕ್ಕಿ ಮೂಲಕ ಸಂದೇಶಗಳನ್ನು ಕಳುಹಿಸಿದ್ದಾರೆ. ಹಿಂದಿಯಲ್ಲಿರುವ ಆ ಸಂದೇಶಗಳಲ್ಲಿ ತಮ್ಮ ಅನಿಸಿಕೆಗಳನ್ನು ರವಾನಿಸಿದ್ದಾರೆ. ಅವರ ತಾಯಿಯ ವಾರ್ಷಿಕ ಪುಣ್ಯ ತಿಥಿ ನೆನೆದು ಭಾವುಕರಾಗಿ ಲತಾ ಮಂಗೇಷ್ಕರ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada